ಹೊನ್ನಾಳಿ : ಪಾಠ ನಡೆದಿಲ್ಲವೆಂದು ಪರೀಕ್ಷೆ ಬಹಿಷ್ಕರಿಸಿದ ಪದವಿ ವಿದ್ಯಾರ್ಥಿಗಳು

ಹೊನ್ನಾಳಿ : ಪಾಠ ನಡೆದಿಲ್ಲವೆಂದು ಪರೀಕ್ಷೆ ಬಹಿಷ್ಕರಿಸಿದ ಪದವಿ ವಿದ್ಯಾರ್ಥಿಗಳು

ಹೊನ್ನಾಳಿ, ಜ.6- ಸರ್ಕಾರಿ ಪದವಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಕಾಂ ಪರೀಕ್ಷೆಯಲ್ಲಿ ಇಂದು ನಡೆಯಬೇಕಿದ್ದ ಫೈನಾನ್ಸಿಯಲ್ ಎಜುಕೇಶನ್ ಅಂಡ್ ಇನ್ವೆಸ್ಟ್‌ಮೆಂಟ್ ಅವೇರ್ನೇಸ್ ವಿಷಯದ ಪರೀಕ್ಷೆಯ ಬಹಿಷ್ಕರಿಸಿದ ಘಟನೆ ನಡೆದಿದೆ.

ದ್ವಿತೀಯ ಬಿ.ಕಾಮ್‌ ನಲ್ಲಿ 98 ವಿದ್ಯಾರ್ಥಿಗಳಿದ್ದು, ಇಂದು ವಿಷಯಕ್ಕೆ ಸಂಬಂಧಿಸಿದ ಸೆಕೆಂಡ್ ಸೆಮ್ ಪರೀಕ್ಷೆ ನಡೆಯಬೇಕಿತ್ತು. ವಿಷಯಕ್ಕೆ ಸಂಬಂಧಿಸಿದ ಉಪನ್ಯಾಸಕರು ಸರಿಯಾಗಿ ತರಗತಿಯನ್ನು ತೆಗೆದುಕೊಳ್ಳದೇ ಇರುವುದರಿಂದ ಪಸ್ಟ್ ಸೆಮ್ ಪರೀಕ್ಷೆಯು ಬರೆದಿಲ್ಲ ಎಂದು ಸ್ಪಷ್ಟಪಡಿಸಿರುವರು.

ಇಂದಿನ ದ್ವಿತೀಯ ಸೆಮ್ ಅನ್ನು ವಿರೋಧಿಸಿ ಪರೀಕ್ಷೆ ಬರೆಯುವುದಿಲ್ಲವೆಂದು ಪರೀಕ್ಷೆಯ ಅವಧಿಯಲ್ಲೇ ಕಾಲೇಜು ಮುಂದೆ ತಮ್ಮ ಅಸಮಾಧಾನವನ್ನು ವಿದ್ಯಾರ್ಥಿಗಳು ಜನತಾವಾಣಿ ಪತ್ರಿಕೆಯ ಮೂಲಕ ವ್ಯಕ್ಷಪಡಿಸಿರುವರು.

ನಂತರದ ಸಮಯದಲ್ಲೇ ಕೆಲವರು ಮಾತ್ರ ಪರೀಕ್ಷೆಯಲ್ಲಿ ತಮಗೆ ತಿಳಿದಿರುವುದನ್ನು ಬರೆದರೆ, ಕೆಲ ವಿದ್ಯಾರ್ಥಿಗಳು ಅರ್ಥವಾಗದೆ ಇರುವ ಪಶ್ನೆಗಳಿಗೆ ಖಾಲಿ ಉತ್ತರ ಪತ್ರಿಕೆ ನೀಡಿದ್ದಾರೆಂದು ತಿಳಿದುಬಂದಿದೆ.

ಈ ವಿಷಯಕ್ಕೆ ಸಂಬಂಧಿಸಿದ ಉಪನ್ಯಾಸಕರಿಂದ ಘಟನೆಗೆ ಕಾರಣ ಹಾಗು ಪರೀಕ್ಷೆಯಲ್ಲಿ ಬರೆದ ಹಾಗು ಬರಿಯದೇ ಇರುವ ವಿದ್ಯಾರ್ಥಿಗಳ ವಿವರ ತಿಳಿದುಬರಬೇಕಿದೆ !

error: Content is protected !!