ಕೃಷಿ ಸಾಲಗಾರರನ್ನು ‘ರೀ ಸ್ಟ್ರಕ್ಟರ್‍’ನಿಂದ ಮುಕ್ತಗೊಳಿಸಲು ಒತ್ತಾಯ

ಕೃಷಿ ಸಾಲಗಾರರನ್ನು ‘ರೀ ಸ್ಟ್ರಕ್ಟರ್‍’ನಿಂದ ಮುಕ್ತಗೊಳಿಸಲು ಒತ್ತಾಯ

ರಾಣೇಬೆನ್ನೂರು, ಜ. 6-  ಹಾವೇರಿ ಜಿಲ್ಲೆಯನ್ನು ಸರ್ಕಾರ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸಿದ ಪರಿಣಾಮ, ಬ್ಯಾಂಕಿನಲ್ಲಿ ಕೃಷಿ ಸಾಲ ಮಾಡಿ, ಕಟ್ ಬಾಕಿ  ಆಗಿರುವ ರೈತರ ಸಾಲವನ್ನು  ದೀರ್ಘಾವಧಿ ಸಾಲವನ್ನಾಗಿ ಮಾರ್ಪಡಿಸಿ ಈ ವರ್ಷ ಸಾಲ ಮರುಪಾವತಿ ಸುವಂತೆ ರೈತರಿಗೆ ಒತ್ತಾಯಿಸಬಾರದೆಂಬ ಸರ್ಕಾರದ ಸದುದ್ಧೇಶ ರೈತರಿಗೆ ಮಾರಕವಾಗುತ್ತಿದೆ  ಎಂದು ರಾಜ್ಯ ರೈತ ಸಂಘ ದೂರಿದೆ.

ಕಳೆದ 8 ರಿಂದ 15 ವರ್ಷದವರೆಗೂ ಸಾವಿರಾರು ರೈತರು ಸಾಲ ಮರುಪಾವತಿ ಮಾಡದೆ ಕಟ್ ಬಾಕಿದಾರರಾಗಿದ್ದಾರೆ (ಎನ್.ಪಿ) ಬ್ಯಾಂಕಿನವರು ಅಂತಹ ರೈತರನ್ನು ಸರ್ಕಾರದ ಬರಗಾಲ ಪೀಡಿತ ಘೋಷಣೆಯ ಆದೇಶದ ನಿಯಮದಂತೆ  ಅವರನ್ನೆಲ್ಲಾ, ರೀಸ್ಟ್ರಕ್ಟರ್ ಚಾಲ್ತಿ ಸಾಲಗಾರರು ಅಂತಾ ತೀರ್ಮಾನಿಸಿ ಏನೂ ಗೊತ್ತಿಲ್ಲದ ರೈತರಿಗೆ ಸಹಿ ಮಾಡಿಸಿಕೊಂಡರೆ ಮುಗಿದೇ ಹೋಯಿತು. ಆ ರೈತರೆಲ್ಲಾ ಚಾಲ್ತಿ ಸಾಲಗಾರರಾಗಿ ಮಾರ್ಪಾ ಡಾಗಿ ಮುಂದೊಂದು ದಿನ ಆ ರೈತರು ಓ.ಟಿ.ಎಸ್. ಯೋಜನೆಗೂ ಒಳಗಾಗದೇ ಸಾಲಮನ್ನಾ ಯೋಜನೆಗೂ ಒಳಗಾಗದೇ ಸರ್ಕಾರದ ಬಹುದೊಡ್ಡ ಆರ್ಥಿಕ ಉಳಿತಾಯ ಯೋಜನೆಗಳಿಂದ ವಂಚಿತರಾಗುತ್ತಾರೆ. 

ಈ ಅರಿವು ರೈತರಿಗೆ ಇರುವುದಿಲ್ಲ, ಬ್ಯಾಂಕಿನವರು ರೈತರಿಗೆ ತಿಳಿಸುವುದಿಲ್ಲ. ನಾವು ಸರ್ಕಾರದ ಆದೇಶವನ್ನು ಪಾಲಿಸಬೇಕಾಗುತ್ತದೆ ಅಂತಾ ಮೊಂಡತನ ಪ್ರದರ್ಶಿಸಿ ಅಮಾಯಕ ರೈತರಿಗೆ ಬಹುದೊಡ್ಡ ಅನ್ಯಾಯ ಮಾಡುತ್ತಿದ್ದಾರೆ. 

ಬರಗಾಲ ಪೀಡಿತ ಜಿಲ್ಲೆ ಎಂದು ರಾಜ್ಯ ಸರ್ಕಾರ ಘೋಷಿಸಿದ ಸಂದರ್ಭದಲ್ಲಿ, ಕಟ್ ಬಾಕಿದಾರ ರೈತರಿಗೆ ಸಾಲ ಮರುಪಾವತಿಗೆ ಬ್ಯಾಂಕಿನವರು ಒತ್ತಾಯಿಸಬಾರದೆಂಬುದು ಒಳ್ಳೆಯ ಉದ್ದೇಶ. ಒಮ್ಮೊಮ್ಮೆ ರೈತರಿಗೆ ಬಹು ದೊಡ್ಡ ನಷ್ಟವಾಗುತ್ತದೆ. ಕಾರಣ ಹಾವೇರಿ ಜಿಲ್ಲೆಯ ಯಾವ ಬ್ಯಾಂಕಿನವರೂ ಕೂಡಾ ರೈತರಿಗೆ `ರೀಸ್ಟ್ರಕ್ಟರ್’ ಫಾರ್ಮ್‌ಗೆ ಸಹಿ ಮಾಡಿಸಿಕೊಳ್ಳದಂತೆ ಸ್ಪಷ್ಟ ಆದೇಶ ಮಾಡಬೇಕೆಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯನವರಿಗೆ ಯುನಿಯನ್ ಬ್ಯಾಂಕ್ ಹುಬ್ಬಳ್ಳಿಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಹರಿರಾಮ್ ಎಸ್.ವಿ.ಎಸ್. ಅಸಿಸೆಂಟ್ ಜನರಲ್ ಮ್ಯಾನೇಜರ್‌  ಶ್ರೀಮತಿ ತೇಜಸ್ವಿನಿ ಅವರಿಗೆ ರೈತ ಮುಖಂಡರಾದ ರವೀಂದ್ರಗೌಡ ಎಫ್. ಪಾಟೀಲ, ಈರಣ್ಣ ಹಲಗೇರಿ ನೇತೃತ್ವದ ರೈತರ ತಂಡ  ಮೊನ್ನೆ ದಿವಸ ಹುಬ್ಬಳ್ಳಿಗೆ ತೆರಳಿ ಚರ್ಚೆ ನಡೆಸಿ, ಸಂಷ್ಟದಲ್ಲಿರುವ ಜಿಲ್ಲೆಯ ರೈತರ ಪರವಾಗಿ ಮನವಿ ಅರ್ಪಿಸಿತು.

ಜಿ. ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ಹಾಗೂ ನಳಂದ ಪದವಿ ಪೂರ್ವ ಕಾಲೇಜು ಸಹ ಯೋಗದಲ್ಲಿ  ಜಗಳೂರಿನಲ್ಲಿ  ಇಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ,ಐಟಿಐ, ಡಿಪ್ಲೋಮಾ, ಪದವಿ, ಇಂಜಿನಿಯರಿಂಗ್ (ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ಸ್, ಮೆಕ್ಯಾ ನಿಕಲ್, ಕೆಮಿಕಲ್) ಎಂಬಿಎ ಮುಗಿಸಿದ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.ವಿವರಕ್ಕೆ ಸಂಪರ್ಕಿಸಿ : 7619647531, 9739977710 ಗೆ ಸಂಪರ್ಕಿಸಬಹುದು. 

error: Content is protected !!