ಕಳಪೆ ಗುಣಮಟ್ಟದ ಗೊಬ್ಬರ ಪೂರೈಸಿದರೆ ಕ್ರಮ

ಕಳಪೆ ಗುಣಮಟ್ಟದ ಗೊಬ್ಬರ ಪೂರೈಸಿದರೆ ಕ್ರಮ

ಗುತ್ತಿಗೆದಾರರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಎಚ್ಚರಿಕೆ

ದಾವಣಗೆರೆ, ಜ. 8- ರಾಜ್ಯ ಸರ್ಕಾರ ತೆಂಗು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ತೆಂಗು ಬೆಳೆಯುವ ರೈತರಿಗೆ ಕಳಪೆ ಗುಣಮಟ್ಟದ ಕ್ರಿಮಿನಾಶಕ, ಬೇವಿನ ಹಿಂಡಿ, ಗೊಬ್ಬರ ಪೂರೈಸಿದ ಬಗ್ಗೆ ಗಮನಕ್ಕೆ ತಂದರೆ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮಾಯಕೊಂಡದ ಶಾಸಕ ಕೆ.ಎಸ್. ಬಸವಂತಪ್ಪ ಎಚ್ಚರಿಕೆ ನೀಡಿದರು.

ನಗರದ ತೋಟಗಾರಿಕೆ ಇಲಾಖೆಯ ಕಚೇರಿಯಲ್ಲಿ ಸೋಮವಾರ 2023-24ನೇ ಸಾಲಿನ ತೆಂಗು ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು ಕುರಿತು ಆಯೋಜಿಸಿದ್ದ ತರಬೇತಿ ಹಾಗೂ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ತೆಂಗು ಇಳುವರಿ ಹೆಚ್ಚು ಬರಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ತೆಂಗು ಬೆಳೆಯುವ ರೈತರ ಒಂದು ಎಕರೆಗೆ 17ಸಾವಿರ ರೂ. ವೆಚ್ಚದ ಕ್ರಿಮಿನಾಶಕ, ಬೇವಿನ ಹಿಂಡಿ, ಗೊಬ್ಬರ ಪೂರೈಸಲು ಗುತ್ತಿಗೆ ನೀಡಿದ್ದು, ಗುತ್ತಿಗೆದಾರರು ಕಳಪೆ ಗುಣಮಟ್ಟದ ಬೇವಿನ ಹಿಂಡಿ, ಗೊಬ್ಬರ, ಕ್ರಿಮಿನಾಶಕ ಪೂರೈಸಬಾರದು. ಕಳಪೆ ಗುಣ ಮಟ್ಟದ ಬೇವಿನ ಹಿಂಡಿ, ಗೊಬ್ಬರ, ಕ್ರಿಮಿನಾಶಕ ಪೂರೈಸಿದ ಬಗ್ಗೆ ಈ ಹಿಂದೆ ರೈತರಿಂದ ಆರೋಪ ಗಳು ಕೇಳಿ ಬಂದಿದ್ದವು. ಗುತ್ತಿಗೆದಾರರು ಇದಕ್ಕೆ ಅವಕಾಶ ಮಾಡಿಕೊಡದಂತೆ ಗುಣಮಟ್ಟದ ಬೇವಿನ ಹಿಂಡಿ, ಕ್ರಿಮಿನಾಶಕ, ಗೊಬ್ಬರ ವಿತರಿಸಬೇಕೆಂದು ಸೂಚನೆ ನೀಡಿದರು.

ತೆಂಗು ಬೆಳೆಯುವುದರಿಂದ ರೈತರು ಆರ್ಥಿಕವಾಗಿ ಸದೃಢರಾಗಬಹುದು. ಜಮೀನಿನ ಬದುಗಳಲ್ಲಿ ಅಥವಾ ಒಂದೆರಡು ಎಕರೆ ಜಮೀನುಗಳಲ್ಲಿ ತೆಂಗು ಬೆಳೆದರೆ ಬೇರೆ ಬೆಳೆ ಬೆಳೆಯುವ ಜೊತೆಗೆ ಇದರಿಂದ ಲಾಭ ಪಡೆಯ ಬಹುದು. ಈ ನಿಟ್ಟಿನಲ್ಲಿ ರೈತರು ತಮ್ಮ ಜಮೀ ನಿನ ಬದುಗಳಲ್ಲಿ ತೆಂಗು ಬೆಳೆದು ಆರ್ಥಿಕವಾಗಿ ಸಬಲರಾಗಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಅರ್ಹ ರೈತರಿಗೆ ಬೇವಿನ ಹಿಂಡಿ, ಮೈಕ್ರೋ ಗೊಬ್ಬರ, ಕ್ರಿಮಿನಾಶಕ ವಿತರಿಸಲಾಯಿತು. ಈ ವೇಳೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ರೇಷ್ಮಾ ಫರ್ವೀನ್ ಹಾಗೂ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!