ದಾವಣಗೆರೆ, ಡಿ. 26- ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪ್ರತಿ ವರ್ಷ ನಡೆಸುವ ಕ್ರಿಕೆಟ್ ಪಂದ್ಯಾವಳಿಯು ಈ ಬಾರಿ ಬೆಂಗಳೂರಿನ ಯಲಹಂಕ ಐಎಂಎ ವತಿಯಿಂದ ಏರ್ಪಾಡಾಗಿತ್ತು.
ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 40 ಟೀಂಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ನಗರದ ಕೀಲು-ಮೂಳೆ ತಜ್ಞ ಡಾ. ಬಿನಯ್ ಸಿಂಗ್ ನಾಯಕತ್ವದ ಸೀನಿಯರ್ ಟೀಂಗೆ ಲೆಜೆಂಡ್ಸ್ ಕಪ್ ಅನ್ನು ದಾವಣಗೆರೆ ಸ್ಟಾರ್ ತಂಡ ತಮ್ಮದಾಗಿಸಿಕೊಂಡಿದೆ.
ಐಎಂಎ ವತಿಯಿಂದ ಕಳೆದ 16 ವರ್ಷಗಳಿಂದ ನಡೆ ಯುತ್ತಿರುವ ಈ ಪಂದ್ಯಾ ವಳಿಯಲ್ಲಿ ದಾವಣಗೆರೆ ತಂಡವು ಪ್ರಥಮ ಬಾರಿಗೆ ಜಯ ಸಾಧಿಸಿದೆ.
ಹಾಸನ ಟೀಂ ವಿರುದ್ಧ 31 ರನ್ಗಳ ಅಂತರದಿಂದ ಜಯ ಸಾಧಿಸಿ, ತಂಡದ ನಾಯಕ ಡಾ. ಬಿನಯ್ ಸಿಂಗ್ ಅವರು ಮ್ಯಾನ್ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದು, ದಾವಣಗೆರೆ ಸ್ಟಾರ್ಸ್ ತಂಡದಿಂದ ಡಾ. ಬಿನಯ್ ಸಿಂಗ್ ಅವರು ಕೇವಲ 23 ಬಾಲ್ಗಳಲ್ಲಿ 56 ರನ್ಗಳ ಬಿರುಸಿನ ಆಟ (2 ಸಿಕ್ಸರ್, 8 ಬೌಂಡರಿ)ದೊಂದಿಗೆ ತಂಡದ ರನ್ ಮೊತ್ತವನ್ನು 135 ಗಳಿಸುವಲ್ಲಿ ಯಶಸ್ವಿಯಾಗಿದೆ. ಟೂರ್ನಮೆಂಟ್ನಲ್ಲಿ 10 ಓವರ್ನಲ್ಲಿ 1 ವಿಕೆಟ್ ಪತನದೊಂ ದಿಗೆ 135 ರನ್ ಗಳಿಸಿ ದಾಖಲೆ ಸಾಧಿಸಿದೆ.
ಡಾ. ಪ್ರಕಾಶ್ ಮತ್ತಿಹಳ್ಳಿ,
ಡಾ. ವಿಜಯ್, ಡಾ. ರಾಜೇಶ್, ಡಾ. ಮಧು, ಡಾ. ವಿಜಯ್ ಕುಮಾರ್, ಡಾ. ಸಂಜಯ್, ಡಾ. ಪ್ರಸನ್ನ, ಡಾ. ವಿನಾಯಕ್, ಡಾ. ವೆಂಕಟೇಶ್, ಡಾ. ರಾಜು, ಡಾ. ವಿನಯ್ ದಾವಣಗೆರೆ ಸ್ಟಾರ್ ತಂಡದಲ್ಲಿದ್ದರು.