ರಾಮ ಮಂದಿರದ ಉದ್ಘಾಟನೆ : ಹರಿಹರಕ್ಕೆ ನಾಳೆ ಅಕ್ಷತೆ ಕಾಳು ಆಗಮನ

ರಾಮ ಮಂದಿರದ ಉದ್ಘಾಟನೆ :  ಹರಿಹರಕ್ಕೆ ನಾಳೆ ಅಕ್ಷತೆ ಕಾಳು ಆಗಮನ

ಹರಿಹರ, ಡಿ.26- ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯುವ ಶ್ರೀ ರಾಮ ಮಂದಿರದ ಉದ್ಘಾಟನೆಯ ನಿಮಿತ್ಯವಾಗಿ ನಗರಕ್ಕೆ ಮಂತ್ರಾಕ್ಷತೆ, ಅಕ್ಷತೆ ಕಾಳು ಗುರುವಾರ ಆಗಮಿಸಲಿದೆ ಎಂದು ಹಿಂದೂ ಜಾಗರಣ ವೇದಿಕೆಯ ತಾಲ್ಲೂಕು ಸಂಚಾಲಕ ದಿನೇಶ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಮ ಮಂದಿರದ ಉದ್ಘಾಟನೆಯ ನಿಮಿತ್ಯವಾಗಿ ಈಗಾಗಲೇ ರಾಜ್ಯದ ಹಲವಾರು ತಾಲ್ಲೂಕುಗಳಲ್ಲಿ ಅಕ್ಷತೆಕಾಳು ಪೂಜಾ ಕಾರ್ಯವನ್ನು ಮಾಡುತ್ತಾ ಸಾಗಿದ್ದು, ಅದರಂತೆ ಹರಿಹರದಲ್ಲಿ ನಾಡಿದ್ದು ಗುರುವಾರ ಅಕ್ಷತೆ ಕಾಳು ಪೂಜೆಯನ್ನು ಪೇಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಾಡಲಾಗು ತ್ತದೆ. ತದನಂತರ ಅದನ್ನು ಮೆರವಣಿಗೆ ಮೂಲಕ ಓಂಕಾರ ಮಠಕ್ಕೆ ತೆಗೆದು ಕೊಂಡು ಹೋಗಿ, ಅಲ್ಲಿಂದ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ನಗರ ಮತ್ತು ಗ್ರಾಮೀಣ ಪ್ರದೇಶದ ಮನೆಗಳಿಗೆ ತಲುಪಿಸಲಾಗುತ್ತದೆ ಎಂದರು.

ಅಕ್ಷತೆಕಾಳು ಮೆರವಣಿಗೆ ವಿವಿಧ ಕಲಾ ಮೇಳಗಳೊಂದಿಗೆ ಪೇಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭಗೊಂಡು ರಾಣಿ ಚೆನ್ನಮ್ಮ ವೃತ್ತ, ಗಾಂಧಿ ವೃತ್ತ, ದೇವಸ್ಥಾನ ರಸ್ತೆ ಮೂಲಕ ಸಂಚರಿಸಿ ಓಂಕಾರ ಮಠಕ್ಕೆ ತಲುಪಲಿದೆ. 

ರಾಮ ಮಂದಿರ ಉದ್ಘಾಟನೆಯನ್ನು ಸ್ಥಳೀಯ ಜನರು ವೀಕ್ಷಿಸಲು ಪೇಟೆ ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಜೊತೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗುತ್ತದೆ. ರಾಮ ಮಂದಿರ ಉದ್ಘಾಟನೆಯ ದಿನದಂದು ರಾಮ ಮಂದಿರ ನಿರ್ಮಾಣದ ಸಂದರ್ಭದಲ್ಲಿ ಹುತಾತ್ಮರಾದವರ ಸವಿನೆನಪಿಗಾಗಿ ಪ್ರತಿಯೊಂದು ಮನೆಯಲ್ಲಿ ಐದು ಎಣ್ಣೆ ದೀಪವನ್ನು ಹಚ್ಚುವ ಮೂಲಕ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಹೆಚ್.ಎಸ್. ರಾಘವೇಂದ್ರ, ಭಜರಂಗ ದಳದ ಶ್ರೀನಿವಾಸ್ ಚಂದಾಪೂರ್, ರವೀಂದ್ರ ಹೋವಳೆ, ಶಿವು, ಚಂದನ್ ಮೂರ್ಕಲ್, ಚಂದ್ರಕಾಂತ್ ಮತ್ತಿತರರು ಹಾಜರಿದ್ದರು. 

error: Content is protected !!