ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಪ್ರಭಾರ ಪ್ರಧಾನ ವ್ಯವಸ್ಥಾಪಕರಾದ (ತಾಂತ್ರಿಕ) ಶ್ರೀ ಎಸ್.ಡಿ. ವಿಶ್ವನಾಥ್ ಅವರ ಧರ್ಮಪತ್ನಿ ಶ್ರೀಮತಿ ಲತಾ ವಿಶ್ವನಾಥ್ ಅವರು ದಿನಾಂಕ 24-12-2023 ರ ಭಾನುವಾರ ಸಂಜೆ 5.50ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 62 ವರ್ಷ ವಯಸ್ಸಾಗಿತ್ತು. ಪತಿ, ಓರ್ವ ಪುತ್ರ, ಓರ್ವ ಪುತ್ರಿ, ಮೊಮ್ಮಕ್ಕಳು, ಸಾದರಳ್ಳಿ ಸಹೋದರರು ಮತ್ತು ಬಂಧುಗಳನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು 4ನೇ ತಿರುವು, 4ನೇ ಮುಖ್ಯರಸ್ತೆ, ಎಸ್.ಎಸ್. ಬಡಾವಣೆ `ಬಿ’ ಬ್ಲಾಕ್, ದಾವಣಗೆರೆ ಇಲ್ಲಿರುವ ಮೃತರ ನಿವಾಸದಲ್ಲಿರಿಸಲಾಗಿದ್ದು, ದಿನಾಂಕ 25-12-2023ರ ಸೋಮವಾರ ಸಂಜೆ 4 ಗಂಟೆಗೆ ಗ್ಲಾಸ್ಹೌಸ್ ಬಳಿ ಇರುವ ಶಾಮನೂರು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಲತಾ ವಿಶ್ವನಾಥ್
![latha vishwanath ಲತಾ ವಿಶ್ವನಾಥ್](https://janathavani.com/wp-content/uploads/2023/12/latha-vishwanath.jpg)