ಇಂದು-ನಾಳೆ ಅ.ಭಾ.ವೀ.ಲಿಂ. ಸಭಾದ ಮಹಾ ಅಧಿವೇಶನ

ಇಂದು-ನಾಳೆ ಅ.ಭಾ.ವೀ.ಲಿಂ. ಸಭಾದ ಮಹಾ ಅಧಿವೇಶನ
  • ಕೃಷಿ ಮತ್ತು ಕೈಗಾರಿಕಾ ಅಧಿವೇಶನ 
  • ಶೈಕ್ಷಣಿಕ ಅಧಿವೇಶನ  
  • ಧಾರ್ಮಿಕ ಅಧಿವೇಶನ  
  • ಬಹಿರಂಗ ಅಧಿವೇಶನ-ನಿರ್ಣಯಗಳ ಮಂಡನೆ
  • ಮಹಿಳಾ – ಯುವ ಅಧಿವೇಶನ 
  • ನೌಕರರ ಅಧಿವೇಶನ  
  • ಸಾಹಿತಿಗಳ ಅಧಿವೇಶನ 
  • ಸಾಧು-ಸಂತರು, ರಾಜಕಾರಣಿಗಳು, ಗಣ್ಯರು ಭಾಗಿ

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ 24 ನೇ ಮಹಾ ಅಧಿವೇಶನವು ಬಾಪೂಜಿ ಎಂ.ಬಿ.ಎ. ಕಾಲೇಜಿನ ಮೈದಾನ ದಲ್ಲಿ ಇಂದು ಮತ್ತು ನಾಳೆ ಏರ್ಪಾಡಾಗಿದ್ದು, ಇಂದು ಮಧ್ಯಾಹ್ನ 12.30 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ.

ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಹುಬ್ಬಳ್ಳಿ ಶ್ರೀ ಜಗದ್ಗುರು ಮೂರುಸಾವಿರ ಸಂಸ್ಥಾನ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಗದಗ ಶ್ರೀ ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜನವರು, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಮಹಾಸ್ವಾಮಿ ಗಳು ಸಾನ್ನಿಧ್ಯ ವಹಿಸುವರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜದೇಶಿಕೇಂದ್ರ ಮಹಾಸ್ವಾಮಿಗಳು 24ನೇ ಮಹಾ ಅಧಿವೇಶನ ಉದ್ಘಾಟಿಸ ಲಿದ್ದು, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾ ಸಭಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಶತಾಯುಷಿ ಭೀಮಣ್ಣ ಖಂಡ್ರೆ ಅವರಿಗೆ ಗೌರವ ಸಮರ್ಪಣೆ ನೆರವೇರಲಿದ್ದು, ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.

ಸಭಾಪತಿ ಬಸವರಾಜ ಹೊರಟ್ಟಿ ಸಿರಿಗೆರೆ ಲಿಂ. ಶಿವಕುಮಾರ ಮಹಾಮಂಟಪವನ್ನು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್  ಎಸ್. ನಿಜಲಿಂಗಪ್ಪ ವೇದಿಕೆಯನ್ನು, ಸಚಿವ ಎಂ.ಬಿ. ಪಾಟೀಲ್ ಜೆ.ಹೆಚ್.ಪಟೇಲ್ ವೇದಿಕೆಯನ್ನು ಉದ್ಘಾಟಿಸಲಿದ್ದಾರೆ.

ಸಂಸದ ಡಾ. ಜಿ.ಎಂ. ಸಿದ್ದೇಶ್ವರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಡಿ.ಜಿ. ಶಾಂತನಗೌಡ, ಬಿ.ಪಿ. ಹರೀಶ್, ಬಿ.ಕೆ. ಸಂಗಮೇಶ್ವರ, ಬಸವರಾಜು ವಿ. ಶಿವಗಂಗಾ, ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಎಸ್.ಎಸ್. ಗಣೇಶ್ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 3 ರಿಂದ 5.30 ರವರೆಗೆ ಕೃಷಿ ಮತ್ತು ಕೈಗಾರಿಕಾ ಅಧಿವೇಶನ ನಡೆಯಲಿದ್ದು, ಸಚಿವ ಶರಣ ಬಸಪ್ಪ ದರ್ಶನಾಪೂರ್ ಉದ್ಘಾಟಿಸುವರು. ಜವಳಿ ವರ್ತಕ ಬಿ.ಸಿ. ಉಮಾಪತಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವ ಭಗವಂತ ಕೂಬಾ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪ್ರೊ. ದಂಡಿನ್, ಡಾ. ಆರ್.ಸಿ. ಜಗದೀಶ್, ಡಾ. ಅಶೋಕ್ ಎಸ್.ಆಲೂರು, ಎಸ್. ರುದ್ರೇಗೌಡರು, ಹೆಚ್.ಏಕಾಂತಯ್ಯ, ಚಂದ್ರಶೇಖರ ನಾರಾಯಣಪುರ, ರಮೇಶ್ ಅಲಗೌಡ ಪಾಟೀಲ್, ವಿಶ್ವನಾಥ್ ಬಿ. ಪಾಟೀಲ್ ಉಪನ್ಯಾಸ ನೀಡಲಿದ್ದಾರೆ.

ಮಧ್ಯಾಹ್ನ 3.30 ರಿಂದ 5.30 ರವರೆಗೆ ಶೈಕ್ಷಣಿಕ ಅಧಿವೇಶನ ಮಹಾಸಭಾ ಉಪಾಧ್ಯಕ್ಷ ಪ್ರಭಾಕರ ಕೋರೆ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಉದ್ಘಾಟಿಸುವರು. ಉಪಾಧ್ಯಕ್ಷ ವೀರಣ್ಣ ಚರಂತಿಮಠ ದಿಕ್ಸೂಚಿ ನುಡಿಯಾಡಲಿದ್ದಾರೆ.

ಪ್ರೊ. ವಿ.ಎಸ್. ಹಲಸೆ, ಡಾ.ಕೆ.ಬಿ. ಗುಡಸಿ, ಕುಲಪತಿ ಪ್ರೊ. ಬಿ.ಡಿ. ಕುಂಬಾರ್, ಡಾ. ಡಿ.ವಿ. ಪರಶಿವಮೂರ್ತಿ, ಡಾ.ಬಿ.ಎಲ್. ಪಾಟೀಲ್ ಉಪನ್ಯಾಸ ನೀಡಲಿದ್ದಾರೆ.

ಸಂಜೆ 6.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಹಾಸಭಾ ಮಹಿಳಾ ವಿಭಾಗದಿಂದ ವಚನ ಗಾಯನ, ವಿವಿಧ ಕಲಾ ತಂಡಗಳಿಂದ ವಚನ ನೃತ್ಯ ರೂಪಕ, ಸಾಣೇಹಳ್ಳಿ ಶಿವಸಂಚಾರ ಕಲಾವಿದರಿಂದ ವಚನ ಗೀತೆ ನಡೆಸಿಕೊಡಲಿದ್ದಾರೆ.

error: Content is protected !!