ಕುರುಬ ಸಮಾಜದ ಅಭಿವೃದ್ಧಿಗಾಗಿ ಜಾಗೃತಿ : ಶ್ರೀ ಈಶ್ವರಾನಂದಪುರಿ ಸ್ವಾಮೀಜಿ

ಕುರುಬ ಸಮಾಜದ ಅಭಿವೃದ್ಧಿಗಾಗಿ ಜಾಗೃತಿ :  ಶ್ರೀ ಈಶ್ವರಾನಂದಪುರಿ ಸ್ವಾಮೀಜಿ

ದಾವಣಗೆರೆ, ಡಿ.21- ಕುರುಬ ಸಮಾಜದ ಬಂಧುಗಳಿರುವ ಗ್ರಾಮಗಳಿಗೆ ಮತ್ತು ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ಮಠ ಮತ್ತು ಸಮಾಜದ ಅಭಿವೃದ್ಧಿಗಾಗಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ. ಈ ಬಗ್ಗೆ ಮುಖಂಡರೊಡನೆ ಚರ್ಚೆ, ಸಂವಾದ ನಡೆಸಿ, ಸಲಹೆ – ಸಹಕಾರ ಪಡೆಯಲಾಗುವುದು ಎಂದು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ಜಗದ್ಗುರು ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

ಇಂದು ಶಾಖಾಮಠಕ್ಕೆ ಭೇಟಿ ನೀಡಿದ್ದ ದಾವಣಗೆರೆ ತಾಲ್ಲೂಕಿನ ಕುರುಬ ಸಮಾಜದ ಮುಖಂಡರನ್ನು ಉದ್ದೇಶಿಸಿ ಶ್ರೀಗಳು ಮಾತನಾಡಿದರು.

ದಾವಣಗೆರೆ ತಾಲ್ಲೂಕಿನ ಕುರುಬ ಸಮುದಾಯದ ಮುಖಂಡರು ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಯವರನ್ನು ಭೇಟಿ ಮಾಡಿ, `ನೂರು ದಿನ ಸಾವಿರ ಹಳ್ಳಿ’ ಕಾರ್ಯಕ್ರಮದ ದಿನಾಂಕ ನಿಗದಿ ಮಾಡಬೇಕು ಎಂದು ಕೋರಿದರು.

ಕುರುಬ ಸಮುದಾಯದ ಮುಖಂಡರಾದ ಕೊಳೇನಹಳ್ಳಿ ಬಿ.ಎಂ.ಸತೀಶ್, ಹೆಚ್.ಜಿ. ಸಂಗಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹದಡಿ ಜಿ.ಸಿ.ನಿಂಗಪ್ಪ, ಮಾಯಕೊಂಡ ವೆಂಕಟೇಶ್, ಮುದಹದಡಿ ದಿಳ್ಳೇಪ್ಪ, ಅಣಬೇರು ಶಿವಮೂರ್ತಿ, ರಾಮಗೊಂಡನಹಳ್ಳಿ ಸಿ.ಡಿ. ಮಹೇಂದ್ರ, ಬಾಡ ಎಂ.ಡಿ.ಸುರೇಶ್‌, ಮಾಯಕೊಂಡ ಮಲ್ಲಿಕಾರ್ಜುನಪ್ಪ, ಕನಕ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಪರಶುರಾಮ್, ನಿರ್ದೇಶಕರಾದ ಜರೇಶ್, ಹೆಚ್.ವೈ.ಶಶಿಧರ, ಕನಗೊಂಡನಹಳ್ಳಿ ಎಸ್.ನಿಂಗಪ್ಪ, ಬಾತಿ ವಿಜಯಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

error: Content is protected !!