ನೇತಾಜಿ ಸುಭಾಷ್ ಚಂದ್ರ ಬೋಸ್ ಶಾಖೆ ಉದ್ಘಾಟನೆ

ದಾವಣಗೆರೆ, ಡಿ. 20 – ಎಲೆಬೇತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸೇವಾದಳ ನೇತಾಜಿ ಸುಭಾಷ್ ಚಂದ್ರ ಬೋಸ್ ಶಾಖೆ ಉದ್ಘಾಟನೆ ಮತ್ತು ರಾಷ್ಟ್ರಧ್ವಜ ಬ್ಯಾಂಡ್ ವಾದನ, ಅಭಿನಯ ಗೀತೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಖಾ ಉದ್ಘಾಟನೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತ ಸಸಿಗೆ ನೀರು ಉಣಿಸುವ ಮೂಲಕ ನೆರವೇರಿಸಿದರು. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ವಿಜಯ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. 

ಭಾರತ ಸೇವಾದಳ ದಾವಣಗೆರೆ ಜಿಲ್ಲೆಯ ನೂತನ ಸಂಘಟಕರಾದ ಫಕ್ಕೀರಗೌಡ ಹಳೇಮನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ರಾಷ್ಟ್ರಧ್ವಜ ಬ್ಯಾಂಡ್ ವಾದನ, ಅಭಿನಯ ಗೀತೆ ತರಬೇತಿ, ಸಾರೇ ಜಹಾಂಸೆ ಅಚ್ಛಾ ಮುಂತಾದ ಸಾಧನೆ ಗೀತೆಗಳನ್ನು ಹೇಳಿಕೊಡುವುದರ ಜೊತೆಗೆ ಅನೇಕ ಡಂಬಲ್ಸ್ ಮುಂತಾದ ಪರಿಕರಗಳನ್ನು ಬಳಸಿ, ನಿಂತು ಮತ್ತು ಕುಳಿತು ಮಾಡುವ ವ್ಯಾಯಾಮಗಳನ್ನು ಮಕ್ಕಳಿಗೆ ಕಲಿಸಿದರು. ಪ್ರತಿ ಶಾಲಾ ಶಾಖೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡಿರುತ್ತಿದ್ದರೆ ಮಕ್ಕಳಿಗೆ ಸೇವಾದಳದ ಬಗ್ಗೆ ಇನ್ನೂ ಹೆಚ್ಚಿನ ಗೌರವ ಸಿಗುತ್ತಿತ್ತು ಎಂದರು.

ಎಲ್ಲಾ ವಿದ್ಯಾರ್ಥಿಗಳು ತುಂಬಾ ಶಿಸ್ತಿನಿಂದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಎಸ್.ಡಿ.ಎಂ.ಸಿ., ಶಿಕ್ಷಕರು ಮತ್ತು ಅತಿಥಿಗಳ ಮೆಚ್ಚುಗೆ ಪಡೆದರು.  

ಭಾರತ ಸೇವಾದಳ ತಾಲ್ಲೂಕು ಅಧಿನಾಯಕ ಶಿಕ್ಷಕ ಎ.ಆರ್. ಗೋಪಾಲಪ್ಪ ಸ್ವಾಗತಿಸಿದರು. ಓ.ಎಂ.ಗಣೇಶಯ್ಯ ವಂದನೆ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಸದಸ್ಯರಾದ ಶ್ರೀಮತಿ ಯಶೋಧ, ರೇಷ್ಮಾಬಾನು, ನಾಗರಾಜ್, ಗಂಗಾಧರ್ ಮತ್ತು ಸಹ ಶಿಕ್ಷಕಿಯರಾದ ಶ್ರೀಮತಿ ಸುಮಿತ್ರಮ್ಮ, ಶಿಲ್ಪ, ಕವಿತ, ಮತ್ತು ವಸಂತಮ್ಮ ಇತರರು ಹಾಜರಿದ್ದರು.

error: Content is protected !!