ದಾವಣಗೆರೆ ನಗರ, ಹಳೆ ಕೊತ್ವಾಲ್ ಪೇಟೆ, ಶಿವಾಜಿ ನಗರ ದುರ್ಗಾಂಬಿಕಾ ದೇವಸ್ಥಾನ ಹತ್ತಿರ ವಾಸಿ ಪೂಜಾರ್ ಮಲ್ಲೇಶಪ್ಪ ಇವರ ಧರ್ಮಪತ್ನಿ ಶ್ರೀಮತಿ ಶಕುಂತಲಮ್ಮ ಪೂಜಾರ್ ಇವರು ದಿನಾಂಕ 19.12.2023ರ ಮಂಗಳವಾರ ಸಂಜೆ 4 ಕ್ಕೆ ನಿಧನರಾದರು. ಮೃತರಿಗೆ 55 ವರ್ಷ ವಯಸ್ಸಾಗಿತ್ತು. ಪತಿ, ಇಬ್ಬರು ಪುತ್ರರು, ಸೊಸೆ, ಸಹೋದರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 20.12.2023ರ ಬುಧವಾರ ಮಧ್ಯಾಹ್ನ 1 ಕ್ಕೆ ಗಾಂಧಿನಗರದ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಶಕುಂತಲಮ್ಮ ಪೂಜಾರ್
