ಹರಿಹರ, ಡಿ,18 – ನಗರದಲ್ಲಿರುವ ಅಂಗಡಿ ವ್ಯಾಪಾರಸ್ಥರು ಆಂಗ್ಲ ನಾಮ ಫಲಕಗಳನ್ನು, ಜಾಹೀರಾತು ಫಲಕಗಳನ್ನು ಪೆಟ್ರೋಲ್ ಬಂಕ್ ಜಾಹೀರಾತು ಫಲಕಗಳನ್ನು ತೆರವು ಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಗ್ರೇಡ್2 ತಹಶಿಲ್ದಾರ್ ರವರೆಗೆ ಮನವಿಯನ್ನು ಅರ್ಪಿಸಿದರು.
ಈ ವೇಳೆ ಮಾತನಾಡಿದ ಮುಖಂಡರು ನಗರದ ಅನೇಕ ವ್ಯಾಪಾರಸ್ಥರು ಆಂಗ್ಲ ಭಾಷೆಯ ನಾಮ ಫಲಕಗಳನ್ನು ಹಾಕಿದ್ದು ಇಲ್ಲಿಂದ 15 ದಿನಗಳ ಒಳಗಾಗಿ ಆಂಗ್ಲ ನಾಮಫಲಕಗಳನ್ನು ತೆರವು ಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜೇಶ್, ಅಮಾನುಲ್ಲಾ, ಕೆ. ರವಿ ಕುಮಾರ್, ಶಶಿ ನಾಯಕ್, ಯಮನೂರ, ಮೆಹಬೂಬ್ ಅಲಿ, ಇಬ್ರಾಹಿ , ಖಲೀಲ್, ಬರ್ಕತ್ ಅಲಿ, ಆರ್. ಮಂಜುನಾಥ್, ಸಾಧಿಕ್ ಅಹಮದ್, ಫಯಾಜ್, ಮುಸ್ತಾಫ ಖಾನ್, ಹಜರತ್ ಅಲಿ ಇತರರು ಹಾಜರಿದ್ದರು.