ದಾವಣಗೆರೆ, ಡಿ. 18 – ಸರ್ಕಾರದ ಮಹತ್ವಾಂಕಾಂಕ್ಷೆಯ ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರಿಗೆ ತಲುಪವಲ್ಲಿ ಹಾಗೂ ಅರ್ಹ ಫಲಾನುಭವಿಗಳಿಗೆ ಯಾವುದೇ ರೀತಿಯಲ್ಲಿ ವಿಳಂಬವಾಗದ ಹಾಗೆ ತಲುಪುವಂತೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ಆದೇಶದ ಮೇರೆೆಗೆ ವಿನೋಬನಗರದ 16ನೇ ವಾರ್ಡಿನ ಸದಸ್ಯ ಎ. ನಾಗರಾಜ್ ಅವರು ಮನೆ ಮನೆಗೆ ಭೇಟಿ ಮಾಡಿದರು. ಸರ್ಕಾರದ ಗೃಹಲಕ್ಷ್ಮಿ, ಅನ್ನಭಾಗ್ಯ, ಭಾಗ್ಯಲಕ್ಷ್ಮಿ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಚಾರಿಸಿ, ಬಹಳಷ್ಟು ಫಲಾನುಭವಿಗಳಿಗೆ ಈ ಸೌಲಭ್ಯ ದೊರೆತಿದ್ದು, ಕೆಲವೊಂದು ಬೆರಳೆಣಿಕೆಯಷ್ಟು ಮಾತ್ರ, ಸಮರ್ಪಕ ದಾಖಲಾತಿ ಇಲ್ಲದೇ ಇರುವ ಫಲಾನುಭವಿಗಳನ್ನು ಗುರುತಿಸಿ ದಾಖಲಾತಿಗಳನ್ನು ಸರಿಪಡಿಸಲು ಸೂಚಿಸಿ, ಸ್ಥಳದಲ್ಲೇ ಅವರಿಗೆ ದಾಖಲಾತಿ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸರಿಪಡಿಸಿ ಮುಂದಿನ ದಿನಗಳಲ್ಲಿ ಅವರಿಗೆ ಈ ಸೌಲಭ್ಯ ದೊರಕಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಎಸ್. ರವಿ, ರಮೇಶ್, ಯೋಗೀಶ್, ಚೋಟು, ಚಂದ್ರಶೇಖರಪ್ಪ, ಚಂದ್ರಪ್ಪ, ದಾನಪ್ಪ, ಜಯವಿಭವ ಇನ್ನೂ ಮುಂತಾದವರು ಹಾಜರಿದ್ದರು.
ವಿನೋಬನಗರದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಮನೆ, ಮನೆಗೆ ಭೇಟಿ
