ದಾವಣಗೆರೆ, ಡಿ. 17 – ನಗರದ ಡಿಸಿಎಂ ಟೌನ್‌ಶಿಪ್‌ನಲ್ಲಿರುವ ಲಿಟ್ಲ್ ಚಾಂಪ್ಸ್ ಶಾಲೆಯಲ್ಲಿ ಮಕ್ಕಳಿಗಾಗಿ ಬೆಂಕಿ ರಹಿತ ಆಹಾರ ತಯಾರಿಕೆ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮ ನಡೆಯಿತು.
ಮಕ್ಕಳು ಬೆಂಕಿ ರಹಿತವಾಗಿ ವಿವಿಧ ರೀತಿಯ ತಿಂಡಿ-ತಿನಿಸುಗಳನ್ನು ತಯಾರಿಸಿ ಪ್ರದರ್ಶಿಸಿದರು. ವಿವಿಧ ಮಕ್ಕಳು ಹಲ ವಾರು ರೀತಿ ತರಕಾರಿಗಳನ್ನು, ಸೊಪ್ಪು ಗಳನ್ನು, ಹಣ್ಣುಗಳನ್ನು, ವಿವಿಧ ರೀತಿ ದಿನಸಿ ಸಾಮಾನುಗಳನ್ನು ಮಾರಾಟ ಮಾಡುವ ಸಂತೆಯ ಚಿತ್ರಣವನ್ನು ಪ್ರದರ್ಶಿಸಿದರು.
ಈ ಕಾರ್ಯಕ್ರಮವನ್ನು ವೀಕ್ಷಿಸಲು ಸುತ್ತ-ಮುತ್ತಲಿನ ವಿವಿಧ ಶಾಲೆಯ ಮಕ್ಕಳು ಹಾಗೂ ಸಾರ್ವಜನಿಕರು ಬಂದು ವೀಕ್ಷಿಸಿ, ಮಕ್ಕಳ ಹಾಗೂ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಕಾರ್ಯ ದರ್ಶಿ ವಿಜಯಕುಮಾರ್, ಖಜಾಂಚಿ ಕಿರಣ್‌ಕುಮಾರ್, ನಿರ್ದೇಶಕ ಶ್ರೀಮತಿ ಸಹನಾ, ಸ್ನೇಹ, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕಿಯರುಗಳಾದ ನಾಗವೇಣಿ, ವಿಜಯ ಲಕ್ಷ್ಮಿ, ಶೋಭಾ, ಆಶಾ, ಕಾವ್ಯ, ಗಂಗಾ, ಲಾವಣ್ಯ ಹಾಗೂ ಭಾಗ್ಯಲಕ್ಷ್ಮಿ ಹಾಜರಿದ್ದರು.