ಹರಪನಹಳ್ಳಿ, ಡಿ. 17 – ಹಣಕ್ಕಿಂತ ಮನುಷ್ಯನಿಗೆ ಆರೋಗ್ಯ ಮುಖ್ಯ, ಈ ಬಗ್ಗೆ ನಿರ್ಲಕ್ಷ್ಯ ವಹಿಸದೇ ಪ್ರತಿಯೊಬ್ಬರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದು ವಾಲ್ಮೀಕಿ ಸಮಾಜದ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಎಚ್.ಟಿ. ವನಜಾಕ್ಷಿ ಹೇಳಿದರು.
ತಾಲ್ಲೂಕಿನ ಹಲವಾಗಲು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಎಚ್.ಟಿ. ರಾಮಚಂದ್ರಪ್ಪ ಹಾಗೂ ಅರೇಮಲ್ಲಾಪುರದ ವಿರುಪಾಕ್ಷಪ್ಪನರವರ ಸ್ಮರಣಾರ್ಥವಾಗಿ ಮಂಗಳೂರಿನ ಶ್ರೀನಿವಾಸ ಆಸ್ಪತ್ರೆಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸದಾ ಒತ್ತಡದ ಬದುಕಿನಲ್ಲಿ ಮನುಷ್ಯ ತಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆ ನಿಷ್ಕಾಳಜಿ ತೊರದೇ ಆರೋಗ್ಯದ ಬಗ್ಗೆ ಗಮನ ಹರಿಸಬೇಕೆಂದರು.
ಮಂಗಳೂರಿನ ಶ್ರೀನಿವಾಸ ಆಸ್ಪತ್ರೆಯ ವೈದ್ಯ ಯಶವಂತ ಮಾತನಾಡಿ, ಸಾರ್ವಜನಿಕರು ಉಚಿತ ಆರೋಗ್ಯ ತಪಾಸಣೆ ಶಿಬಿರಗಳಲ್ಲಿ ಭಾಗವಹಿಸಿ ವೈದ್ಯರಿಂದ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಹಲವಾಗಲು ಗ್ರಾ.ಪಂ. ಅಧ್ಯಕ್ಷರಾದ ಸರಿತಾ ರಮೇಶ್, ವಾಲ್ಮೀಕಿ ಸಮಾಜದ ಮಾಜಿ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ, ಎಂ. ದ್ಯಾಮಪ್ಪ, ಶಿವಯೋಗಿ, ಗುರುಸಿದ್ದಪ್ಪ, ಕರಿಯಪ್ಪ, ಕರಿಬಸಪ್ಪ, ಗುಡ್ಡಪ್ಪ, ಶಿವಣ್ಣ, ಬಸವರಾಜಪ್ಪ, ಶಿಕ್ಷಕಿ ಶಕುಂತಲಾ, ಉಮಾದೇವಿ, ಮಾರುತಿ ವೈದ್ಯರಾದ ವಿಷ್ಣು, ಸರಸ್ವತಿ, ನಿತೇಶ, ಅಭಿಷೇಕ, ಜಿನ್ನಾ ಸೇರಿದಂತೆ ಇತರರು ಇದ್ದರು.