ಸೈನಿಕರ ಕಲ್ಯಾಣ ನಿಧಿ ಹೆಚ್ಚು ಸಂಗ್ರಹಿಸಲು ಒತ್ತು

ಸೈನಿಕರ ಕಲ್ಯಾಣ ನಿಧಿ ಹೆಚ್ಚು ಸಂಗ್ರಹಿಸಲು ಒತ್ತು

ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್

ದಾವಣಗೆರೆ, ಡಿ.15- ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಅಂಗ ವಾಗಿ ಸೈನಿಕರ ಕಲ್ಯಾಣ ನಿಧಿಯನ್ನು ಈ ವರ್ಷವೂ ದಾವಣಗೆರೆಯಿಂದ ಹೆಚ್ಚು ಸಂಗ್ರಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ತಿಳಿಸಿದರು. 

ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಅಂಗ ವಾಗಿ ಸೈನಿಕರ ಕಲ್ಯಾಣ ನಿಧಿಯನ್ನು ಸಂಗ್ರಹಿಸಲು ಧ್ವಜ ಬಿಡುಗಡೆ ಮಾಡಿ ಮಾತನಾಡಿದರು. 

ಸೈನಿಕರು ದೇಶ ರಕ್ಷಣೆಯಲ್ಲಿ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸುತ್ತಾರೆ. ಈ ವೇಳೆ ಮರಣವನ್ನೂ ಹೊಂದಬಹುದು ಮತ್ತು ಗಾಯಾಳುಗಳಾಗ ಬಹುದು. ಸೈನಿಕರಿಗೆ ಮತ್ತು ಇವರ ಕುಟುಂಬದವರಿಗೆ ನೆರವಾಗಲು ಸೈನಿಕರ ಕಲ್ಯಾಣ ನಿಧಿ ಸಹಕಾರಿಯಾಗಲಿದೆ ಎಂದು ಹೇಳಿದರು. 

ಸೈನಿಕ್ ವೆಲ್‌ಫೇರ್ ಬೋರ್ಡ್ ಎನ್ನುವುದು ನಮ್ಮ ದೇಶದ ಸೈನಿಕರ ಅಭಿವೃದ್ಧಿಗಾಗಿ ರಚನೆಯಾಗಿರುವ ಒಂದು ವಿಶೇಷ ಘಟಕವಾಗಿದೆ. ಸೈನಿಕರ ಕಲ್ಯಾಣ ನಿಧಿಗೆ ಕಳೆದ ವರ್ಷ ದಾವಣಗೆರೆ ಜಿಲ್ಲೆಯಿಂದ ಹೆಚ್ಚು ನಿಧಿಯನ್ನು ಸಂಗ್ರಹಿಸಲಾಗಿತ್ತು. ಇದಕ್ಕಾಗಿ ಡಿಸೆಂಬರ್ 7 ರಂದು ರಾಜ್ಯಪಾಲರು ಗೌರವಿಸಿ, ಸನ್ಮಾನಿಸಿದ್ದರು. ಈ ಬಾರಿಯೂ ಜಿಲ್ಲೆಯ ಎಲ್ಲಾ ಇಲಾಖೆ ಯವರು ಹೆಚ್ಚಿನ ಪ್ರಮಾಣದಲ್ಲಿ ಧನಸಹಾಯ ಮಾಡಿ ಸೈನಿಕರ ಅಭಿವೃದ್ಧಿಗೋಸ್ಕರ ಧ್ವಜ ನಿಧಿಯನ್ನು ಸಂಗ್ರಹಿಸಬೇಕಾಗಿದೆ ಎಂದರು.

ಜಿ.ಪಂ. ಸಿಇಓ ಸುರೇಶ್ ಇಟ್ನಾಳ್ ಮಾತ ನಾಡಿ, ದೇಶದ ಗಡಿಯಲ್ಲಿ ಸೈನಿಕರು ಸೆಣಸುವ ಮೂಲಕ ನಮ್ಮೆಲ್ಲ ರನ್ನು ರಕ್ಷಿಸುವರು. ಕಳೆದ ವರ್ಷದಂತೆ ಎಲ್ಲಾ ಇಲಾಖೆಗಳ ಸಹಕಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಸೈನಿಕರ ಕಲ್ಯಾಣ ನಿಧಿಯನ್ನು ಸಂಗ್ರಹಿಸಲಾಗುತ್ತದೆ ಎಂದರು. 

ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಸೈನಿಕ ಕಲ್ಯಾಣ ಮಂಡಳಿ ಹಾಗೂ ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ. ಸಿ.ಎ.ಹಿರೇಮಠ, ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಮಹೇಂದ್ರಕರ್, ಕಾರ್ಯದರ್ಶಿ ಮಂಜುನಾಥ ಪಿಸಾಳೆ, ಸಂಘದ ನಿರ್ದೇಶಕರಾದ ಮಾಲಗೌಡ ಪಾಟೀಲ್, ಬಿ.ವಿ.ಚಂದ್ರಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

error: Content is protected !!