ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆಗೆ ಒತ್ತಾಯ

ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆಗೆ ಒತ್ತಾಯ

ದಾವಣಗೆರೆ, ಡಿ. 12 – ಕಲ್ಬುರ್ಗಿಯ ವಕೀಲ ಈರಣ್ಣಗೌಡರ ಹತ್ಯೆಯನ್ನು ಡಿಐಜಿಯವರಿಂದ ತನಿಖೆ ನಡೆಸಿ ಎಲ್ಲಾ ಹಂತಕರನ್ನು ಕೂಡಲೇ ಬಂಧಿಸಬೇಕು, ಮೃತರ ಕುಟುಂಬ ವರ್ಗದವರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಮತ್ತು ವಕೀಲರ ಸಂರಕ್ಷಣಾ ಕಾಯ್ದೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಜಿಲ್ಲಾ ವಕೀಲರ ಸಂಘದಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‍ಕುಮಾರ್, ಕಾರ್ಯದರ್ಶಿ ಎಸ್. ಬಸವರಾಜ್, ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳ್, ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ್, ಕಾರ್ಯಕಾರಿ ಸಮಿತಿ ಸದಸ್ಯ ವಾಗೀಶ್‍ ಕಟಗಿಹಳ್ಳಿ ಮಠ, ಎಂ. ಚೌಡಪ್ಪ, ಸಂತೋಷ್ ಕುಮಾರ್, ಎಂ. ರಾಘವೇಂದ್ರ, ಅಜ್ಜಯ್ಯ ಆವರಗೆರೆ, ಎಲ್. ನಾಗರಾಜ್, ಮುಸ್ತಾಕ್ ಅಹ್ಮದ್ ಮೌಲ್ವಿ, ಹೆಚ್.ಎಸ್. ಯೋಗೀಶ್, ಗುಮ್ಮನೂರು ಮಲ್ಲಿಕಾರ್ಜುನ್, ಚಂದ್ರಶೇಖರ್, ಆಂಜನೇಯ ಗುರೂಜಿ, ಧನಂಜಯ, ಎಸ್. ನಾಗರಾಜ್, ಆರ್. ಬಸವರಾಜ್, ಸಲೀಂ, ಹೆಚ್.ಎಸ್. ಗುರುಮೂರ್ತಿ, ಜಿ.ಕೆ. ಬಸವರಾಜ್, ಜಯಲಕ್ಷ್ಮಿ, ಅಲಮೇಲು ಸೇರಿದಂತೆ  ಮುಂತಾದವರು ಹಾಜರಿದ್ದರು.  

ಇದಕ್ಕೂ ಮುನ್ನ ಜಿಲ್ಲಾ ವಕೀಲರ ಸಂಘದ ಸಾಂಸ್ಥಿಕ ಸಮುದಾಯ ಭವನದಲ್ಲಿ ಅಧ್ಯಕ್ಷ ಎಲ್.ಹೆಚ್. ಅರುಣ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಕೀಲರ ಹತ್ಯೆಯನ್ನು ಖಂಡಿಸಿ ಮತ್ತು ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಲು ಒತ್ತಾಯಿಸಿ ವಕೀಲರಾದ ಗುಮ್ಮನೂರು ಮಲ್ಲಿಕಾರ್ಜುನ್, ಎಸ್. ಮಂಜು, ಡಿ.ಪಿ. ಬಸವರಾಜ್, ಟಿ.ಆರ್. ಗುರುಬಸವರಾಜ್, ಕರಿಬಸಪ್ಪ, ಭಾಗ್ಯಲಕ್ಷ್ಮಿ, ನೋಟರಿ ಖಾದರ್, ರಾಜಪ್ಪ, ಕಂದಗಲ್ ಗೌಡ್ರು ಮಲ್ಲಿಕಾರ್ಜುನ್ ಮಾತನಾಡಿದರು.  

error: Content is protected !!