ಹರಪನಹಳ್ಳಿ, ಡಿ.5- ಬಿಜೆಪಿ ಸರ್ಕಾರದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಕೊಡುತ್ತಿದ್ದ ಸ್ಪ್ರಿಂಕ್ಲರ್ ಪೈಪ್ನ ದರ 1900 ಕ್ಕೆ ನೀಡುತ್ತಿತ್ತು. ಈಗ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕೃಷಿ ಇಲಾಖೆಯ ವತಿಯಿಂದ ನೀಡುವ ಸ್ಪ್ರಿಂಕ್ಲರ್ ಪೈಪ್ನ ದರವನ್ನು 4600 ರೂ.ಗಳಿಗೆ ಹೆಚ್ಚಿಸಿರುವ ಕ್ರಮ ಸರಿಯಿಲ್ಲ ಎಂದು ಜಿಲ್ಲಾ ರೈತ ಮುಖಂಡ ಲಿಂಗರಾಜ ಫಣಿಯಾಪುರ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಈ ವರ್ಷ ಅದರಲ್ಲೂ ಮಳೆ ಇಲ್ಲದೇ ರೈತ ಗೋಳಾಡುತ್ತಿರುವಾಗ ಬರ ಅಧ್ಯಯನ ಮಾಡಿ, ಕೇವಲ ರೈತರಿಗೆ 2000 ಸಾವಿರ ರೂಪಾಯಿ ಕೊಡುತ್ತೇವೆ ಎಂದು ಘೋಷಿಸಿದೆ. ಕನಿಷ್ಠ ರೈತರಿಗೆ ಇಪ್ಪತ್ತೈದು ಸಾವಿರ ರೂ.ಗಳನ್ನು (25,000) ಸರ್ಕಾರ ಘೋಷಿಸಬೇಕೆಂದು ರೈತ ಮುಖಂಡ ಫಣಿಯಾಪುರ ಲಿಂಗರಾಜ ಒತ್ತಾಯಿಸಿದರು. ಒಂದು ಕಡೆ ಸರ್ಕಾರದಿಂದ ಕೊಡುವ ಕೃಷಿ ಇಲಾಖೆಗಳ ಸಾಮಗ್ರಿಗಳ ಬೆಲೆ ಏರಿಕೆ ಹಾಗೂ ಬರ ಪರಿಹಾರ ರೈತರ ಮೇಲೆ ಬರೆ ಎಳೆದಂತಾ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.