ಅಕ್ಕಮಹಾದೇವಿಯ ದಿಟ್ಟತನ ಇಂದಿಗೂ ಆದರ್ಶ ಪ್ರಾಯ

ಅಕ್ಕಮಹಾದೇವಿಯ ದಿಟ್ಟತನ   ಇಂದಿಗೂ ಆದರ್ಶ ಪ್ರಾಯ

ದಾವಣಗೆರೆ, ಡಿ. 3- ಮಹಾದೇವಿ ತನ್ನ ಬದುಕಿನಲ್ಲಿ ಬಂದ ನೂರಾರು ಸಂಕಷ್ಟಗಳನ್ನು ದಿಟ್ಟತನ, ಛಲ ಹಾಗೂ ಧೈರ್ಯದಿಂದ ಎದುರಿಸಿ ಕಲ್ಯಾಣಕ್ಕೆ ಬಂದು ಅಲ್ಲಿ ಅನುಭವ ಮಂಟಪದಲ್ಲಿ ಅಲ್ಲಮ ಪ್ರಭುವಿನ ಎಲ್ಲ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಿ ಅಕ್ಕಮಹಾದೇವಿಯಾದಳು. 

ಅಲ್ಲದೇ, ಕದಳಿ ವನದಲ್ಲಿ ತನ್ನ ಪರಮಾರಾಧ್ಯ ದೈವ ಚನ್ನಮಲ್ಲಿಕಾರ್ಜುನನಲ್ಲಿ ಐಕ್ಯಳಾದಳು ಎ೦ದು ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಎಸ್. ಎಂ. ಮಲ್ಲಮ್ಮ ನುಡಿದರು.

ತಾಲ್ಲೂಕು ಕ.ಸಾ.ಪ.ದಿಂದ ಶಾಮನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶಾಲಾ ಅಂಗಳದಲ್ಲಿ ಸಾಹಿತ್ಯೋತ್ಸವ ಕಾರ್ಯಕ್ರಮದ ನಿಮಿತ್ತ್ಯ ದತ್ತಿ ಉಪನ್ಯಾಸ ನೀಡುತ್ತಾ ತಿಳಿಸಿದರು.

ತಾಲ್ಲೂಕು ಕಸಾಪ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಕನ್ನಡ ಭಾಷೆಯ ಹಿರಿಮೆ ತಿಳಿಸಿದರು.

ದತ್ತಿ ದಾನಿ  ಹೊನ್ನಾಯಕನಹಳ್ಳಿಯ ಮುರಿಗೇಂದ್ರಪ್ಪ ಮಾತನಾಡಿ, ಕನ್ನಡ ಭಾಷೆಯ ಕಂಪನ್ನು ತಿಳಿಸಿ ಜನಪದ ಗೀತೆ ಹಾಡಿದರು. ಮತ್ತೋರ್ವ ದತ್ತಿದಾನಿ ನಿವೃತ್ತ ಪ್ರಾಚಾರ್ಯ ಮಲ್ಲಿಕಾರ್ಜುನ ಹಲಸಂಗಿ ಮಕ್ಕಳಿಗೆ ಹಿತವಚನ ನುಡಿದರು.

ಮುಖ್ಯೋಪಾಧ್ಯಾಯ ವಿ.ಎನ್ .ಬಸವರಾಜಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ತಾ.ಕಸಾಪ ನಿರ್ದೇಶಕರಾದ ಶ್ರೀಮತಿ ಪರಿಮಳ ಜಗದೀಶ್ ದತ್ತಿ ದಾನಿಗಳನ್ನು ಪರಿಚಯಿಸಿದರು. ಶ್ರೀಮತಿ ಮಮತಾ ಕೊನೆಯಲ್ಲಿ ಸರ್ವರನ್ನೂ ವಂದಿಸಿದರು. ಎಲ್ಲರನ್ನು ಸ್ವಾಗತಿಸಿದ ಸಂಗೀತ ಶಿಕ್ಷಕಿ ಶ್ರೀಮತಿ ಉಮಾ ಮಹದೇವ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

error: Content is protected !!