ಡಿಸಿಎಂನಲ್ಲಿ ನಿರ್ಮಾಣ ಹಂತದ ಕಾಮಗಾರಿ ವೀಕ್ಷಿಸಿದ ಸಂಸದರು

ಡಿಸಿಎಂನಲ್ಲಿ ನಿರ್ಮಾಣ ಹಂತದ ಕಾಮಗಾರಿ ವೀಕ್ಷಿಸಿದ ಸಂಸದರು

ದಾವಣಗೆರೆ, ನ.27- ಸ್ಮಾರ್ಟ್ ಸಿಟಿ ಅನುದಾನದಲ್ಲಿ   ನಗರದ ಡಿ.ಸಿ.ಎಂ. ಟೌನ್‍ಶಿಪ್‍ನಲ್ಲಿ ಸುಮಾರು 6.50 ಕೋಟಿ ರೂ. ವೆಚ್ಚದಲ್ಲಿ ಬಹುಕ್ರೀಡೆಗಳ ಒಳಾಂಗಣ ಕ್ರೀಡಾಂ ಗಣದಲ್ಲಿ ರಾಷ್ಟ್ರಮಟ್ಟದ ಕ್ರೀಡಾಸ್ಪರ್ಧೆಗೆ ಪೂರಕವಾದ ಸೌಲಭ್ಯಗಳನ್ನು ಒದಗಿಸಿ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.  

ಡಿ.ಸಿ.ಎಂ. ಟೌನ್‍ಶಿಪ್‍ನಲ್ಲಿ ನಿರ್ಮಾಣ ಹಂತದಲ್ಲಿರುವ ಒಳಾಂಗಣ ಕ್ರೀಡಾಂಗಣವನ್ನು ವೀಕ್ಷಣೆ ಮಾಡಿ ನಂತರ ಅವರು ಮಾತನಾಡಿದರು.

ಇದರ ಮೂಲ ಉದ್ದೇಶವೇ ಬೇರೆಯಾಗಿತ್ತು. ಇಲ್ಲಿ ಕ್ರೀಡಾ ತರಬೇತುದಾರರರಿಗೆ ತರಬೇತಿ ನೀಡುವ ಕೇಂದ್ರವ ನ್ನಾಗಿ ಮಾಡುವ ಉದ್ದೇಶವಿತ್ತು. ಆದರೆ, ಅದನ್ನು ಬದಲಾ ಯಿಸಿ, ರಾಜ್ಯ ಮತ್ತು ರಾಷ್ಟ್ರಮಟ್ಟದ ಒಳಾಂಗಣ ಕ್ರೀಡೆಗಳಿಗಾಗಿ ಕ್ರೀಡಾಂಗಣವನ್ನಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದರು. 

ಪ್ರೇಕ್ಷಕರ ಗ್ಯಾಲರಿ ಸಾಮರ್ಥ್ಯ ಕಡಿಮೆ ಇದೆ. ಸಾಧ್ಯ ವಾದರೆ ಉತ್ತರ ಭಾಗದಲ್ಲಿ ಪ್ರೇಕ್ಷಕರ ಗ್ಯಾಲರಿ ಸಾಮರ್ಥ್ಯ ವನ್ನು ಹೆಚ್ಚಿಸಲು ಅವಕಾಶ ಕಲ್ಪಿಸಿಕೊಳ್ಳಿ ಎಂದು ಸ್ಮಾರ್ಟ್ ಸಿಟಿ ಇಂಜಿನಿಯರ್‍ಗಳಿಗೆ ಸಲಹೆ ನೀಡಿದರು. 4ಷಟಲ್ ಕೋರ್ಟ್ ಹಾಗೂ ಬಾಸ್ಕೆಟ್‍ಬಾಲ್ ಕೋರ್ಟ್‍ಗಳನ್ನು ನಿರ್ಮಾಣ ಮಾಡುವ ಉದ್ದೇಶವಿದೆ ಎಂದು ಇಂಜಿನಿಯ ರ್‍ಗಳು ಮಾಹಿತಿ ನೀಡಿದರು. ಒಳಾಂಗಣ ಕ್ರೀಡಾಂಗಣಕ್ಕೆ ಬರುವ ಆಪ್ರೋಚ್ ರಸ್ತೆಗಳು ತೀರಾ ಹದಗೆಟ್ಟಿದ್ದು, ರಸ್ತೆ ಅಭಿವೃದ್ದಿಪಡಿಸುವಂತೆ ಸಂಸದರು ಸೂಚನೆ ನೀಡಿದರು.

31.03.2023 ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಅದರೆ, ಅನೇಕ ಕಾರಣಗಳಿಂದ ಕಾಮಗಾರಿ ನಿಧಾನಗತಿ ಯಲ್ಲಿ ನಡೆಯುತ್ತಿದೆ. ಜನವರಿ 2024 ರ ಅಂತ್ಯಕ್ಕೆ ಕಾಮಗಾರಿ ಯನ್ನು ಪೂರ್ಣಗೊಳಿಸಲಾಗುವುದು. ಈ ಕುರಿತು ಗುತ್ತಿಗೆದಾ ರರಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್‍ಕುಮಾರ್ ತಿಳಿಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರಸನ್ನಕುಮಾರ್, ಮಾಜಿ ಮೇಯರ್ ಎಸ್.ಟಿ.ವೀರೇಶ್, ಪಾಲಿಕೆ ಸದಸ್ಯರುಗಳಾದ ಕೆ.ಎಂ.ವೀರೇಶ್, ಮುಖಂಡರುಗಳಾದ ಹೆಗ್ಗಪ್ಪ, ಜಯಪ್ರಕಾಶ್, ಗಣೇಶಪ್ಪ, ರಮೇಶ್, ಸುರೇಶ್ ಸೇರಿದಂತೆ ಇತರರು ಸಂಸದರ ಜೊತೆಗಿದ್ದರು.

error: Content is protected !!