ದಾವಣಗೆರೆ ಎಸ್.ಎಸ್. ಬಡಾವಣೆ `ಬಿ’ ಬ್ಲಾಕ್ 4ನೇ ಮೇನ್ 9ನೇ ಕ್ರಾಸ್ (# 3570) ವಾಸಿ ನಗರಸಭೆಯ ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಲಿಂ|| ಶ್ರೀ ಬಿ. ಹಾಲಯ್ಯ ಅವರ ಧರ್ಮಪತ್ನಿ ಶ್ರೀಮತಿ ಬಿ.ಹೆಚ್. ಸುವರ್ಣಮ್ಮ ಅವರು ದಿನಾಂಕ 23-11-2023ರ ಗುರುವಾರ ಸಂಜೆ 5.25 ಕ್ಕೆ ಲಿಂಗೈಕ್ಯರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 76 ವರ್ಷ ವಯಸ್ಸಾಗಿತ್ತು. ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 24-11-2023ರ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ದಾವಣಗೆರೆ ಗ್ಲಾಸ್ಹೌಸ್ ಹತ್ತಿರ ಇರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 24, 2024