ಕಣ್ಮನ ಸೂರೆಗೊಂಡ ಚಂದ್ರಯಾನ ಮಾದರಿ

ಕಣ್ಮನ ಸೂರೆಗೊಂಡ ಚಂದ್ರಯಾನ ಮಾದರಿ

ದಾವಣಗೆರೆ, ನ. 13 – ನಗರದ ಗಾಜಿನ ಮನೆಯಲ್ಲಿ ಆಯೋಜಿಸಲಾಗಿರುವ ನಾಲ್ಕು ದಿನಗಳ ಫಲ ಪುಷ್ಪ ಪ್ರದರ್ಶನವನ್ನು ಜಿಲ್ಲಾ ಧಿಕಾರಿ ಎಂ.ವಿ. ವೆಂಕಟೇಶ್ ಉದ್ಘಾಟಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಇವರ ಸಂಯುಕ್ತಾ ಶ್ರಯದಲ್ಲಿ ನ.16ರವರೆಗೆ ಪ್ರದರ್ಶನ ಆಯೋಜಿಸಲಾಗಿದೆ

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಧಿಕಾರಿ ವೆಂಕಟೇಶ್, ಜಿಲ್ಲೆಯ ವೈವಿಧ್ಯತೆಯನ್ನು ಬಿಂಬಿಸಲು ಈ ಪ್ರದರ್ಶನ ಆಯೋಜಿಸಲಾಗಿದೆ. ಪ್ರಮುಖವಾಗಿ ಚಂದ್ರಯಾನ-3  ಪರಿಕಲ್ಪನೆಯಲ್ಲಿ ಫಲ ಪುಷ್ಪ ಪ್ರದರ್ಶನ ಆಯೋಜಿಸಿದ್ದೇವೆ. ಈ ಕಾರ್ಯಕ್ರಮದಲ್ಲಿ ನಗರದ ದೃಶ್ಯಕಲಾ ಮಹಾವಿದ್ಯಾಲಯದ ಕಲಾ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದರು.

ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಕನಸಿನಂತೆ ಗಾಜಿನ ಮನೆ ರೂಪುಗೊಂಡಿದೆ. ಇಲ್ಲಿ ಆಯೋಜಿಸಲಾಗಿರುವ ಫಲ-ಪುಷ್ಪ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮೇಯರ್ ವಿನಾಯಕ್ ಪೈಲ್ವಾನ್, ಪಾಲಿಕೆ ಆಯುಕ್ತೆ ರೇಣುಕಾ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಜಿ.ಸಿ. ರಾಘವೇಂದ್ರ ಪ್ರಸಾದ್, ಪಾಲಿಕೆ ಸದಸ್ಯರಾದ ರೇಖಾ ಸುರೇಶ್ ಗಂಡಗಾಳೆ,ಮೀನಾಕ್ಷಿ ಜಗದೀಶ್, ಮುಖಂಡರಾದ ಎಸ್. ಮಲ್ಲಿಕಾರ್ಜುನ್, ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಜಯರಾಜ್ ಎಂ. ಚಿಕ್ಕಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

ಉಡಾವಣೆಗೊಳ್ಳುತ್ತಿರುವ ಶೈಲಿಯಲ್ಲಿ ರುವ ಚಂದ್ರಯಾನ – 3 ದ ರಾಕೆಟ್‌ನ 25 ಅಡಿ ಎತ್ತರದ ಹೂವಿನ ಮಾದರಿ ಪುಷ್ಪ ಪ್ರದರ್ಶನದ ಕೇಂದ್ರ ಬಿಂದುವಾಗಿತ್ತು. ಪಕ್ಕದಲ್ಲೇ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ಗಳ ಕಲಾಕೃತಿಗಳು ಕಣ್ಮನ ಸೆಳೆಯುವಂತಿದ್ದವು. 

ಕಣ್ಮನ ಸೂರೆಗೊಂಡ ಚಂದ್ರಯಾನ ಮಾದರಿ - Janathavani

16 ಅಡಿ ಎತ್ತರ ಹಾಗೂ 10 ಅಡಿ ಅಗಲದ ಶಿವನಂದಿಯ ಕಲಾಕೃತಿ ಹಾಗೂ ಐ.ಸಿ.ಸಿ. ವಿಶ್ವಕಪ್‌ ಹಿನ್ನೆಲೆಯಲ್ಲಿ §ಈ ಸಲ ವಿಶ್ವಕಪ್ ನಮ್ಮದೇ¬ ಎಂಬ ಅಡಿ ಟಿಪ್ಪಣಿಯಲ್ಲಿ 8 ಅಡಿ ಎತ್ತರದ ವಿಶ್ವಕಪ್ ಮಾದರಿಯೂ ಇಲ್ಲಿದೆ. 

ಮೀನುಗಾರಿಕೆ ಇಲಾಖೆ ಸಹಭಾಗಿತ್ವದಲ್ಲಿ ಮತ್ಸ್ಯಗಳ ಪ್ರದರ್ಶನ ಆಯೋಜಿಸಲಾಗಿದ್ದರೆ, ಜಿಲ್ಲೆಯ ವಿವಿಧ ರೈತರು ತಮ್ಮ ಹೊಲಗಳಲ್ಲಿನ ಫಲಗಳನ್ನು ಪ್ರದರ್ಶನಕ್ಕೆ ತಂದಿದ್ದಾರೆ. ಹದಿನೈದು ಸಾವಿರಕ್ಕೂ ಹೆಚ್ಚು ಅಲಂಕಾರಿಕ ಗಿಡಗಳು ಗಾಜಿನ ಮನೆಯನ್ನು ಇನ್ನಷ್ಟು ಆಕರ್ಷಣೀಯಗೊಳಿಸಿವೆ.

ದೃಶ್ಯಕಲಾ ಮಹಾವಿದ್ಯಾಲಯದ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಚಿತ್ರಕಲೆ, ಶಿಲ್ಪಕಲಾಕೃತಿ ಹಾಗೂ ಕೆತ್ತನೆಗಳನ್ನು ಪ್ರದರ್ಶನಕ್ಕೆ ಇರಿಸಿರುವುದು ಮತ್ತೊಂದು ವಿಶೇಷ. ಜಿಲ್ಲೆ ಹಾಗೂ ನಾಡಿನ ವಿವಿಧ ಐತಿಹಾಸಿಕ ತಾಣಗಳ ಕೆತ್ತನೆಗಳು ಮನಸೂರೆಗೊಳ್ಳುವಂತಿವೆ. ಕಲಾವಿದರ ಕಲ್ಪನಾ ಲೋಕವನ್ನು ಬಿಂಬಿಸುವ ಕಲಾಕೃತಿಗಳೂ ಇಲ್ಲಿವೆ. 

ಉದ್ಘಾಟನೆಯ ನಂತರ ಕನ್ನಡ ನಾಡು – ನುಡಿಯ ವೈಭವ ಸಾರುವ ಗೀತೆಗಳ ಹಿನ್ನೆಲೆಯೊಂದಿಗೆ ಸಂಗೀತ ಕಾರಂಜಿ ಪ್ರದರ್ಶಿಸಲಾಯಿತು. 

error: Content is protected !!