ಹೊಳಲ್ಕೆರೆ ತಾಲ್ಲೂಕು ದೊಗ್ಗನಾಳ್ ಗ್ರಾಮದ ದಿ|| ಡಾ|| ಡಿ.ಎಂ. ನಂಜುಂಡಪ್ಪನವರ ಕಿರಿಯ ಸಹೋದರ ಶ್ರೀ ಜಿ. ಛತ್ರಪತಿ ಅವರು ದಿನಾಂಕ 26-10-2023ರ ಗುರುವಾರ ಸಂಜೆ 6.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 88 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ಅವರ ಮಗ ಮಹದೇವ ಛತ್ರಪತಿ ಗೌಡ ಅವರು ಅಮೆರಿಕಾ(USA)ದಿಂದ ನಾಳೆ ಬಂದ ನಂತರ, ನಾಡಿದ್ದು ದಿನಾಂಕ 28-10-2023ರ ಶನಿವಾರ ಮಧ್ಯಾಹ್ನ ಹೊಳಲ್ಕೆರೆ ತಾಲ್ಲೂಕಿನ ದೊಗ್ಗನಾಳ್ ಗ್ರಾಮದಲ್ಲಿರುವ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಗೌಡ್ರ ಛತ್ರಪತಿ
![gowdru chatrapathi ಗೌಡ್ರ ಛತ್ರಪತಿ](https://janathavani.com/wp-content/uploads/2023/10/gowdru-chatrapathi-.jpg)