ಹರಪನಹಳ್ಳಿ ಸಿಟಿ ಮೇಗಳಪೇಟೆ ವಾಸಿ, ಹರಪನಹಳ್ಳಿ ಉಜ್ಜಯಿನಿ ಕಾಲೇಜಿನ ನಿರ್ದೇಶಕರಾಗಿ ಹಾಗೂ ಕಾಲೇಜ್ ಕಟ್ಟಡ ನಿರ್ಮಾಣದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದ ಶ್ರೀ ಪಟೇಲ್ ಬಸವರಾಜಗೌಡ್ರ ಅವರು ದಿನಾಂಕ 25-10-2023ರ ಬುಧವಾರ ರಾತ್ರಿ 9.20ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 97 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 26-10-2023ರ ಗುರುವಾರ ಸಾಯಂಕಾಲ 4 ಗಂಟೆಗೆ ಹರಪನಹಳ್ಳಿಯ ಸ್ವಂತ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಪಟೇಲ್ ಬಸವರಾಜಗೌಡ್ರ
