ಡೀಮ್ಡ್ ವಿವಿಯಿಂದ ಎಸ್ಸೆಸ್‌ಗೆ ಗೌರವ ಡಾಕ್ಟರೇಟ್

ಡೀಮ್ಡ್ ವಿವಿಯಿಂದ  ಎಸ್ಸೆಸ್‌ಗೆ ಗೌರವ ಡಾಕ್ಟರೇಟ್

ದಾವಣಗೆರೆ,ಅ.19- ರಾಜ್ಯದ ವಿಜಯ ಪುರದ ಡೀಮ್ಡ್ ವಿಶ್ವವಿದ್ಯಾಲಯವು (ಬಿಎಲ್‌ಡಿಇ) ಸಾಧಕರಿಗೆ ಕೊಡಮಾಡುವ ಗೌರವ ಡಾಕ್ಟರೇಟ್ ಅನ್ನು ಈ ಬಾರಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ನೀಡಿದೆ.

ಎಸ್ಸೆಸ್ ಅವರು ಸಮಾಜಕ್ಕೆ ಸಲ್ಲಿಸುತ್ತಿರುವ ಅನುಪಮ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲು ತೀರ್ಮಾ ನಿಸಲಾಗಿದೆ ಎಂದು ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾ ಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (ವಿಜಯಪುರ)ದ ಪ್ರಕಟಣೆ ತಿಳಿಸಿದೆ. ನಾಳೆ ದಿನಾಂಕ 20ರ ಶುಕ್ರವಾರ ಬೆಳಿಗ್ಗೆ 11.30ಕ್ಕೆ ಬಿಎಲ್‌ಡಿಇ ಸಭಾಂಗಣ ಭವನದಲ್ಲಿ ಏರ್ಪಾಡಾಗಿರುವ ಡೀಮ್ಡ್ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಎಸ್ಸೆಸ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ.

ಬಿಎಲ್‌ಡಿಇ ಕುಲಾಧಿಪತಿಗಳೂ ಆಗಿರುವ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿರುವ ಈ  ಸಮಾರಂಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಸಮಕುಲಾಧಿಪತಿಗಳೂ ಆಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಆರ್. ಪಾಟೀಲ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.

ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಆರ್.ಎಸ್. ಮುಧೋಳ, ಸಮಕುಲಾಧಿಪತಿಗಳಾದ ಪ್ರೊ. ವೈ.ಎಂ. ಜಯರಾಜ್, ಪ್ರೊ. ಅರುಣ್ ಸಿ. ಇನಾಮದಾರ ಉಪಸ್ಥಿತರಿರುವರು.

ಎಸ್ಸೆಸ್‌ಗೆ 2ನೇ ಡಾಕ್ಟರೇಟ್ : ಶಾಮನೂರು ಶಿವಶಂಕರಪ್ಪ ಅವರು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಗುರುತಿಸಿ ಕಳೆದ 15 ವರ್ಷಗಳ ಹಿಂದೆ ಕುವೆಂಪು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಇದೀಗ ಡೀಮ್ಡ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡುತ್ತಿದೆ.

error: Content is protected !!