ಗೊಂಬೆ ಮನೆ…

ಗೊಂಬೆ ಮನೆ…

ದಾವಣಗೆರೆ, ಅ. 17- ದಸರಾ ನಮ್ಮ ನಾಡ ಹಬ್ಬ. ಈ ಹಬ್ಬದಲ್ಲಿ ಹಲವಾರು ವಿಶೇಷತೆಗಳನ್ನು ಕಾಣಬಹುದು. ಅದರಲ್ಲಿ  ಗೊಂಬೆ ಕೂರಿಸುವುದೂ ಒಂದು. ದಾವಣಗೆರೆ ವಿನೋಬನಗರದ 3ನೇ ಮೇನ್, 11ನೇ ಕ್ರಾಸ್‌ನಲ್ಲಿ ಶ್ರೀಮತಿ ಕೆ. ಚಂದ್ರಿಕಾ ಅವರು ಕಳೆದ 27 ವರ್ಷಗಳಿಂದ ತಮ್ಮ ಮನೆಯಲ್ಲಿ ಗೊಂಬೆ ಕೂರಿಸುತ್ತಿದ್ದಾರೆ.

ಪೋಸ್ಟ್‌ ಮಾಸ್ಟರ್ ಕೆಲಸ ಮಾಡುತ್ತಿದ್ದ ಚಂದ್ರಿಕಾ ಅವರು, ಪ್ರಸ್ತುತ ವಿಆರ್‌ಎಸ್ ತೆಗೆದುಕೊಂಡು ತಮ್ಮ ಮಗನೊಂದಿಗೆ ಧಾರವಾಡದಲ್ಲಿ ವಾಸವಾಗಿದ್ದಾರೆ. ಆದಾಗ್ಯೂ ನಮ್ಮೂರು ಎಂಬ ಅಭಿಮಾನದಿಂದ ಹತ್ತು ದಿನ ಮೊದಲೇ ದಾವಣಗೆರೆಯಲ್ಲಿನ ತಮ್ಮ ಸ್ವಂತ ಮನೆಗೆ ಬಂದು ಗೊಂಬೆ ಕೂರಿಸಿದ್ದಾರೆ. ಪುತ್ರ ಪವನ್ ಹಾಗೂ ಸೊಸೆ ಸುಷ್ಮಾ ಇವರಿಗೆ ಸಾಥ್ ನೀಡಿದ್ದಾರೆ.

ಪಾಢ್ಯದಂದು ಗೊಂಬೆ ಕೂರಿಸಿದ್ದು, ವಿಜಯದಶಮಿ ವರೆಗೂ ಪ್ರದರ್ಶನಕ್ಕಿಡಲಿದ್ದೇವೆ. ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ಜನರು ಗೊಂಬೆ ಪ್ರದರ್ಶನ ವೀಕ್ಷಿಸುತ್ತಿದ್ದಾರೆ. ಪ್ರತಿದಿನ 200ಕ್ಕೂ ಹೆಚ್ಚು ಜನರು ಬರುತ್ತಾರೆ. ಅದರಲ್ಲೂ ಶಾಲಾ ಮಕ್ಕಳೇ ಆಸಕ್ತಿಯಿಂದ ವೀಕ್ಷಣೆಗೆ ಬರುತ್ತಿದ್ದಾರೆ ಎನ್ನುತ್ತಾರೆ ಚಂದ್ರಿಕಾ.  ಗೊಂಬೆ ಕೂರಿಸಲೆಂದೇ ಮನೆಯಲ್ಲಿ ಮಹಡಿಯಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಸುಮಾರು
4 ಸಾವಿರದಷ್ಟು ವಿವಿಧ ಬಗೆಯ ಗೊಂಬೆಗಳಿವೆ ಎಂದವರು ಹೇಳಿದರು. 

error: Content is protected !!