ಒತ್ತಡದಿಂದ ಹೊರಬರಲು ಕ್ರೀಡೆ ಉತ್ತಮ ಮಾರ್ಗ : ಎಸ್ಪಿ ಉಮಾ

ಒತ್ತಡದಿಂದ ಹೊರಬರಲು ಕ್ರೀಡೆ ಉತ್ತಮ ಮಾರ್ಗ : ಎಸ್ಪಿ ಉಮಾ

ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾ ದಿನಾಚರಣೆ

ದಾವಣಗೆರೆ, ಅ. 11-  ಕ್ರೀಡೆಗಳು ನಾಯಕತ್ವದ ಗುಣಗಳನ್ನು, ತಂಡ ಮನೋಭಾವವನ್ನು ಬೆಳೆಸುತ್ತವೆ. ವ್ಯಕ್ತಿತ್ವ ವಿಕಸನಕ್ಕೆ ಕ್ರೀಡಾತ್ಮಕ ಮನೋಭಾವ ಬೆಳೆಸಿಕೊಳ್ಳಲು ಕ್ರೀಡಾಭ್ಯಾಸವು ಹೇಗೆ ಪೂರಕವಾಗುತ್ತದೆ ಎಂದು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೀವನವನ್ನು ಉದಾಹರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್  ಹೇಳಿದರು. 

ನಗರದ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋ ಧನಾ ಕೇಂದ್ರದಲ್ಲಿ ಜರುಗಿದ ವಾರ್ಷಿಕ ಕ್ರೀಡಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು ವಿದ್ಯಾ ರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ವೈದ್ಯಕೀಯ ವಿದ್ಯಾರ್ಥಿ ಜೀವನದಲ್ಲಿ ಸಹಜವಾಗಿ ಒತ್ತಡಗಳು ಇರುತ್ತವೆ. ಇಂತಹ ಒತ್ತಡಗಳಿಂದ ಹೊರಬರಲು ಮಾದಕ ದ್ರವ್ಯಗಳಂತಹ ದುರಭ್ಯಾಸಗಳಿಗೆ ದಾಸರಾಗುವ ಬದಲು, ಕ್ರೀಡೆಗಳನ್ನು ಉತ್ತಮ ಸಾಧನವಾಗಿ ಮಾಡಿಕೊಳ್ಳಬೇಕು ಎಂದು ಅಭಿಮತ ವ್ಯಕ್ತಪಡಿಸಿದರು. 

ಪಂಜು ಬೆಳಗಿಸುವ ಮೂಲಕ ಕ್ರೀಡಾ ದಿನಾಚರಣೆಗೆ ವಿದ್ಯುಕ್ತ ಚಾಲನೆ ನೀಡಿದ ಅವರಿಗೆ ಇದೇ ಸಂದರ್ಭದಲ್ಲಿ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಸನ್ಮಾನಿಸಲಾಯಿತು. 

ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಸ್. ಪ್ರಸಾದ್ ಮಾತನಾಡಿ, ಶಿಸ್ತು ಆರೋಗ್ಯಕ್ಕೆ ಪೂರಕವಾದ ಹವ್ಯಾಸಗಳು ನಿರಂತರ ಕ್ರೀಡಾಭ್ಯಾಸವು ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ, ನಮ್ಮ ಜೀವನದ ಇತರೆ ಕ್ಷೇತ್ರಗಳಲ್ಲಿಯೂ ಸಹಕಾರಿಯಾಗಿದೆ ಎಂದು ತಿಳಿಸಿದರು. 

ವೈದ್ಯಕೀಯ ನಿರ್ದೇಶಕರಾದ ಡಾ. ಅರುಣ್ ಕುಮಾರ್ ಅಜ್ಜಪ್ಪ ಮಾತನಾಡಿ, ತಮ್ಮ ವಿದ್ಯಾರ್ಥಿ ಜೀವನದ ಕ್ರೀಡಾ ದಿನಗಳ ಅನುಭವಗಳನ್ನು ಹಂಚಿಕೊಂಡು ಪ್ರೋತ್ಸಾಹದ ನುಡಿಗಳನ್ನು ಆಡಿದರು.

ಹಿರಿಯ ವೈದ್ಯರುಗಳಾದ ಡಾ. ವಿಜಯ್ ಕುಮಾರ್ ಬಿ. ಜತ್ತಿ, ಡಾ|| ರಾಘವೇಂದ್ರ, ಡಾ|| ಜಯಸಿಂಹ ಡಾ|| ಸಂತೋಷ್‌ ಕುಮಾರ್ ಮುಂತಾದವರು ಭಾಗವಹಿಸಿದ್ದರು. 

ವೈದ್ಯಕೀಯ ವಿದ್ಯಾರ್ಥಿ ಸಂಘ ಸಮನ್ವಯ-2023 ಕ್ರೀಡಾ ಸಮಿತಿಯ ಅಧ್ಯಕ್ಷ ಡಾ|| ಪಾರ್ಥಸಾರಥಿ ಸ್ವಾಗತಿಸಿದರು. ಕ್ರೀಡಾ ಸಮಿತಿ ಕೋ ಛೇರ್ಮನ್‌ಗಳಾದ ಡಾ. ಮನು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಡಾ. ಎ.ಎನ್. ಪ್ರದೀಪ್ ವಾರ್ಷಿಕ ಕ್ರೀಡಾ ವರದಿ ಸಲ್ಲಿಸಿದರು. ಡಾ. ವಿ.ಎಸ್. ಹರೀಶ್ ಕುಮಾರ್ ವಂದಿಸಿದರು.

ನಂತರ ವಿದ್ಯಾರ್ಥಿಗಳು ಮಾರ್ಚ್ ಫಾಸ್ಟ್ ನಡೆಸಿದರು. ಶಾಟ್‌ಪುಟ್, ಜಾವಲಿನ್ ಥ್ರೋ ಬಾಲ್‌,  ಡಿಸ್ಕಸ್ ಥ್ರೋ ಮುಂತಾದ ಕ್ರೀಡೆಗಳಲ್ಲಿ ನೂರಾರು ಸಂಖ್ಯೆಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿ ಯರು, ವೈದ್ಯರು ಉತ್ಸುಕತೆಯಿಂದ ಪಾಲ್ಗೊಂಡಿದ್ದರು. ಕೊನೆಯಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. 

error: Content is protected !!