ದಾವಣಗೆರೆ ಕ್ಲಬ್ ಚುನಾವಣೆ: ಎ.ಬಿ.ಚಂದ್ರಶೇಖರ್ ಗುಂಪಿಗೆ ಜಯ

ದಾವಣಗೆರೆ ಕ್ಲಬ್ ಚುನಾವಣೆ:  ಎ.ಬಿ.ಚಂದ್ರಶೇಖರ್ ಗುಂಪಿಗೆ ಜಯ

ದಾವಣಗೆರೆ, ಅ.15- ನಗರದ ಪ್ರತಿಷ್ಠಿತ ದಿ ದಾವಣಗೆರೆ ಕ್ಲಬ್‌ನ 2023-24ರಿಂದ 2025-26ರವರೆಗೆ ಮೂರು ವರ್ಷಗಳ ಆಡಳಿತಾವಧಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಎ.ಬಿ. ಚಂದ್ರಶೇಖರ್ ಗುಂಪಿಗೆ ಭರ್ಜರಿ ಜಯ ದೊರೆತಿದ್ದು, ಆನಗೋಡು ನಂಜುಂಡಪ್ಪ ಗುಂಪು ಪರಾಭವಗೊಂಡಿದೆ.
ಪ್ರವಾಸಿ ಮಂದಿರ ರಸ್ತೆಯಲ್ಲಿನ ದಿ ದಾವಣಗೆರೆ ಕ್ಲಬ್‌ನಲ್ಲಿ ಇಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಕ್ಲಬ್‌ನ 597 ಜನ ಸದಸ್ಯರಲ್ಲಿ 488 ಮತ ಚಲಾಯಿಸಿದರು.
ಎ.ಬಿ. ಚಂದ್ರಶೇಖರ್ 301 ಮತಗಳನ್ನು ಪಡೆಯುವ ಮೂಲಕ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಉಳವಯ್ಯ ಎಸ್.ಜಿ. 315 ಮತ ಪಡೆದು ಉಪಾಧ್ಯಕ್ಷರಾಗಿ, ಗೌರವ ಕಾರ್ಯದರ್ಶಿಗಳಾಗಿ ರವಿಶಂಕರ್ ಪಲ್ಲಾಗಟ್ಟೆ (229), ಗೌರವ ಸಹ ಕಾರ್ಯದರ್ಶಿಯಾಗಿ ಐನಳ್ಳಿ ಜಯದೀಪ್ (324), ಖಜಾಂಚಿಯಾಗಿ ಪ್ರಶಾಂತ್ ಗುಪ್ತ ಎಸ್.ಕೆ. (255) ಹಾಗೂ ನಿರ್ದೇಶಕರುಗಳಾಗಿ ಬೆಳ್ಳೂಡಿ ಸದಾನಂದ (353), ರುದ್ರೇಶ್ ಹೆಚ್.ವಿ. (296), ಅಭಿಷೇಕ್ ಬಿ.ಜೆ. (284), ಬಾದಾಮಿ ಮಲ್ಲಿಕಾರ್ಜುನ (269), ವಿಶ್ವನಾಥ್ ಬಿ. ಪಾಟೀಲ್ (241), ಸುಪುತ್ರ ಕುಮಾರ್ ಬಿ.ಟಿ (208) ಆಯ್ಕೆಯಾಗಿದ್ದಾರೆ. ಎಸ್.ಎಂ. ವೀರಪ್ಪ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

error: Content is protected !!