ಬೀದಿನಾಯಿಗಳ ಬೊಗಳುವಿಕೆೆಗೆ ಬೇಸತ್ತ ಜನತೆ

ಬೀದಿನಾಯಿಗಳ ಬೊಗಳುವಿಕೆೆಗೆ ಬೇಸತ್ತ ಜನತೆ

ನಾಯಿಗಳ ಸಮಸ್ಯೆ ಬಗೆಹರಿಸದೆ  ನಿರ್ಲಕ್ಷ್ಯ ವಹಿಸಿದ ಮಹಾನಗರ ಪಾಲಿಕೆ

ದಾವಣಗೆರೆ, ಅ.11- ಬೀದಿ ನಾಯಿಗಳ  ಹಾವಳಿಗೆ ಹೈರಾಣಾಗಿರುವ ಜನತೆ, ಇದೀಗ ರಾತ್ರಿಯಾಗುತ್ತಲೇ ಅವುಗಳ ಬೊಗಳುವಿಕೆ ತಾಳಲಾರದೇ ಬೇಸತ್ತು ಹೋಗಿದ್ದಾರೆ.

ಇಲ್ಲಿನ ತರಳಬಾಳು ನಗರ, ವಿದ್ಯಾನಗರ, ಶಿವಕುಮಾರ ಸ್ವಾಮಿ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ರಾತ್ರಿ ಎಂಟು  ಗಂಟೆಯಾಗುತ್ತಲೇ ನಾಯಿಗಳ ಬೊಗಳುವಿಕೆ ಆರಂಭವಾಗುತ್ತದೆ. ಪರಸ್ಪರ ಕಿತ್ತಾಡಿಕೊಂಡು ಬೊಗಳುವುದು ಒಂದು ರೀತಿಯ ಇಸ್ರೇಲ್  ಹಾಗೂ ಪ್ಯಾಲಿಸ್ತೇನ್ ಯುದ್ಧ ನೆನಪಿಸುತ್ತದೆ ಎಂದು ತರಳಬಾಳು ನಿವಾಸಿಗಳು ದೂರಿದ್ದಾರೆ.

ನಮಗೆ ಓದಲು ಈ ಬೀದಿ ನಾಯಿಗಳಿಂದ ಕಿರಿ ಕಿರಿಯಾಗುತ್ತದೆ ಎಂಬುದು ವಿದ್ಯಾರ್ಥಿಗಳ ಅಳಲಾ ದರೆ, ಬೇಗ ಮಲಗೋಣ ಎಂದರೆ ನಾಯಿಗಳು ಬಿಡುತ್ತಿಲ್ಲ ಎಂಬುದು ಹಿರಿಯರ ದೂರು. ಪ್ರತಿ ಬಡಾವಣೆಯ ರಸ್ತೆಯಲ್ಲಿ ಗುಂಪು ಗುಂಪಾಗಿ ತಿರುಗಾಡುವ ಈ ಶ್ವಾನಗಳಿಂದಾಗಿ ಚಿಕ್ಕ ಮಕ್ಕಳನ್ನು ಹೊರಗೆ ಕಳುಹಿಸಲು ಪೋಷಕರು ಭಯ ಪಡುವಂತಾಗಿದೆ. ರಾತ್ರಿ ಕೆಲಸ ಕಾರ್ಯ ಮುಗಿಸಿಕೊಂಡು ಮನೆಯತ್ತ ತೆರಳುವವರ ಮೇಲೆ ನಾಯಿಗಳು ದಾಳಿ ನಡೆಸುತ್ತಿ ರುವುದರಿಂದ ಭಯದಿಂದಲೇ ಸೈಕಲ್ಲು, ಬೈಕುಗಳನ್ನು ಓಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಲಾಗುತ್ತದೆ ಎಂದು ಮಹಾನಗರ ಪಾಲಿಕೆ ಹೇಳುತ್ತಿದೆಯಾದರೂ, ಸಮರ್ಪಕವಾಗಿ ನಡೆಯುತ್ತಿಲ್ಲ. 

ಈ ಹಿನ್ನೆಲೆಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಇನ್ನಾದರೂ ಮಹಾನಗರ ಪಾಲಿಕೆ ಅಧಿಕಾರಿಗಳು ನಾಯಿಗಳ ಹಾವಳಿಯಿಂದ ಮುಕ್ತಿ ನೀಡಲಿ ಎಂಬುದು ನಗರವಾಸಿಗಳ ಆಶಯವಾಗಿದೆ.

error: Content is protected !!