ಹರಿಹರದಲ್ಲಿ ವಿಜೃಂಭಣೆಯ ಹಿಂದೂ ಮಹಾಗಣಪತಿ ವಿಸರ್ಜನೆ

ಹರಿಹರದಲ್ಲಿ ವಿಜೃಂಭಣೆಯ ಹಿಂದೂ ಮಹಾಗಣಪತಿ ವಿಸರ್ಜನೆ

ಟ್ರ್ಯಾಕ್ಟರ್ ಓಡಿಸುವ ಮೂಲಕ ಗಣೇಶ ವಿಸರ್ಜನೆ ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಬಿ.ಪಿ. ಹರೀಶ್

ಹರಿಹರ, ಅ. 8- ನಗರದ ಹಿಂದೂ ಜಾಗರಣ ವೇದಿಕೆ ಮತ್ತು ಹಿಂದೂ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಪ್ರತಿಷ್ಟಾಪನೆ ಮಾಡಿದ್ದ ಹಿಂದೂ ಮಹಾಗಣಪತಿಯನ್ನು ಸಡಗರ, ಸಂಭ್ರಮ ಮತ್ತು ವಿಜೃಂಭಣೆಯಿಂದ ತುಂಗಭದ್ರಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. 

ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಶ್ರೀ ವಿನಾಯಕ ಮೂರ್ತಿಗೆ ಅರ್ಚಕ ವೆಂಕಟೇಶ ವಿಶೇಷ ಪೂಜೆ, ಮಹಾಮಂಗಳಾರತಿ ಸೇರಿದಂತೆ ಪೂಜಾ ಕಾರ್ಯ ನೆರವೇರಿಸಿದ ಬಳಿಕ ಶಾಸಕ ಬಿ.ಪಿ. ಹರೀಶ್ ಟ್ರ್ಯಾಕ್ಟರ್ ಓಡಿಸುವ ಮೂಲಕ ಗಣೇಶ ವಿಸರ್ಜನೆ ಮೆರವಣಿಗೆಗೆ ಚಾಲನೆ ನೀಡಿದರು. 

ಮೆರವಣಿಗೆಯಲ್ಲಿ ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ವಚನಾನಂದ ಮಹಾಸ್ವಾಮೀಜಿ, ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ  ಪಾಲ್ಗೊಂಡಿದ್ದರು. 

ಯಂತ್ರಗಳ ಮೂಲಕ ಪೇಪರ್ ಹೂವುಗಳನ್ನು ಕುಣಿಯವ ಯುವಕರ ಮೇಲೆ ಎರಚಲಾಯಿತು.  ಸಾಯಿಬಾಬಾ ಮಂದಿರ ಟ್ರಸ್ಟ್, ಪಾಟೀಲ್ ವಂಶಸ್ಥರು, ನವರತ್ನ ಜ್ಯೂಯಲರ್ಸ್, ಅಕ್ಷಯ ಆಸ್ಪತ್ರೆ, ಶಿವಮೊಗ್ಗ ರಸ್ತೆ ಆಟೋ ನಿಲ್ದಾಣದ ಚಾಲಕರು ಮತ್ತು ಮಾಲೀಕರು, ನಗರದ ವಿವಿಧ ಸಂಘಟನೆಯವರಿಂದ ಮಜ್ಜಿಗೆ, ಪಾನಕ, ಪ್ರಸಾದವನ್ನು ಮೆರವಣಿಗೆ ಹಾದು ಹೋಗುವ ಆಯಕಟ್ಟಿನ ಸ್ಥಳಗಳಲ್ಲಿ ಹಂಚಿದರು.

ಮೆರವಣಿಗೆ ಹೋಗುವ ಸ್ಥಳವನ್ನು ಕೇಸರಿ ಬಂಟಿಂಗ್ಸ್, ಬ್ಯಾನರ್, ಬಾವುಟವನ್ನು ಕಟ್ಟಿ ಶೃಂಗಾರ ಮಾಡಲಾಗಿತ್ತು. ಗಾಂಧಿ ವೃತ್ತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಛತ್ರಪತಿ ಶಿವಾಜಿ, ರಾಣಿ ಚೆನ್ನಮ್ಮ ವೃತ್ತದಲ್ಲಿ ವೀರ ಆಂಜನೇಯ ಸ್ವಾಮಿ ಮತ್ತು ಬಸವೇಶ್ವರ, ಶಿವಮೊಗ್ಗ ರಸ್ತೆಯಲ್ಲಿ ಶ್ರೀರಾಮ ಲಕ್ಷ್ಮಣ, ಸಾವರ್ಕರ್ ಭಾವಚಿತ್ರವನ್ನು ಇಡಲಾಗಿತ್ತು.

ಪೊಲೀಸ್ ಇಲಾಖೆಯಿಂದ ಸಿಪಿಐಗಳಾದ ಸುರೇಶ್ ಸರಗಿ, ಸಿದ್ದನಗೌಡ, ಪಿಎಸ್ಐಗಳಾದ ದೇವಾನಂದ್, ಪ್ರಭು ಕೆಳಗಿನ ಮನೆ, ಅರವಿಂದ್ ಸೇರಿದಂತೆ ಅಧಿಕಾರಿಗಳು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.   ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಅಡಿಷನಲ್ ಎಸ್ಪಿ ಬಸರಗಿ, ಡಿವೈಎಸ್ಪಿ ಜಿ.ಎಸ್.  ಬಸವರಾಜ್  ಇತರರು ಹಾಜರಿದ್ದರು

ಮೆರವಣಿಗೆಯಲ್ಲಿ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ತಪೋವನ ಛೇರ್ಮನ್  ಶಶಿಕುಮಾರ್, ಹಿಂದೂ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಎ.ಬಿ. ವಿಜಯಕುಮಾರ್, ಟ್ರಸ್ಟ್ ಅಧ್ಯಕ್ಷ ಬಸವನಗೌಡ, ಕಸಬಾ ಗೌಡ್ರು, ಲಿಂಗರಾಜ್ ಪಾಟೀಲ್, ವಿ.ಬಿ. ವಿನಯಕುಮಾರ್, ಗಿರೀಶ್ ಗೌಡ, ರಾಜು ರೋಖಡೆ, ಹಿಂಡಸಘಟ್ಟ ಲಿಂಗರಾಜ್, ಸ್ವಾತಿ ಹನುಮಂತಪ್ಪ, ಚಂದ್ರಕಾಂತ, ಸಂತೋಷ್ ಗುಡಿಮನಿ, ವೀರೇಶ್ ಅಜ್ಜಣ್ಣನವರ್,  ಬಾತಿ ಚಂದ್ರಶೇಖರ್, ಮಹಾಂತೇಶಪ್ಪ ಕೆಂಚನಹಳ್ಳಿ, ಮೋಹನ್, ಕಂಚಿಕೇರಿ ಚಿದಾನಂದ, ಶಿವು, ಮಹೇಶ್, ಅದ್ವೈತ ಶಾಸ್ತ್ರಿ, ಚಂದನ್ ಮೂರ್ಕಲ್, ಅಜಿತ್ ಸಾವಂತ್, ಶಿವಪ್ರಕಾಶ್ ಶಾಸ್ತ್ರಿ, ತುಳಜಪ್ಪ ಭೂತೆ, ರವಿ ರಾಯ್ಕರ್, ರಾಚಪ್ಪ, ಮಂಜಾನಾಯ್ಕ್, ಕೀರ್ತಿಕುಮಾರ್, ಹೊವಳೆ ರಾಜು, ನಿರಂಜನ್ ದೀಟೂರು, ಉಮೇಶ್ ಗಂಗನಹರಸಿ, ಶಿವಶಂಕರ್ ಚಿಕ್ಕಬಿದರಿ, ವಿನಾಯಕ, ಡಿಶ್ ಅಣ್ಣಪ್ಪ, ರಡ್ಡಿ ಹನುಮಂತಪ್ಪ, ರಾಮಣ್ಣ, ಕುಮಾರ್ ಸ್ವಾಮಿ ಹಿರೇಮಠ, ಸಂಗನಾಳಮಠ, ಚಂದ್ರು ಸರಪದ್, ಆಂಜನಪ್ಪ, ಕಂಚಿಕೇರಿ ಮಹೇಶಪ್ಪ, ತಿಪ್ಪೇಶ್,  ಕಿರಣ್ ಕಂಚಿಕೇರಿ, ರಾಘವೇಂದ್ರ, ಸೋಮಶೇಖರ್, ಲೋಕೇಶ್ ಮೂರ್ಕಲ್, ಆನಂದ್ ಮೂರ್ಕಲ್, ಶಿವಕುಮಾರ್,  ಅಶ್ವಿನಿ ಕೃಷ್ಣ, ರುದ್ರಮ್ಮ, ಇಂದ್ರಾಣಿ, ಸಾಕ್ಷಿ, ಸಾವಿತ್ರ, ಡಿ.ವೈ. ಇಂದ್ರಮ್ಮ, ರೂಪಾ ಶಶಿಕಾಂತ್, ರೂಪಾ ಕಾಟ್ವೆ, ಪ್ರಮೀಳಾ ನಲ್ಲೂರು, ಅಂಬುಜಾ ರಾಜೊಳ್ಳಿ, ರಷ್ಮಿ ಮೆಹರ್ವಾಡೆ, ಸುಧಾ ಸೋಳಂಕಿ, ಪಾರ್ವತಿ, ಮಂಜುಳಾ,  ನಾಗಮ್ಮ, ಮಾಲಾ, ಭಾಗ್ಯಮ್ಮ, ಸಿದ್ದಮ್ಮ, ಚಂದ್ರು ಹೊನ್ನಾಳಿ,  ಕರಿಬಸಪ್ಪ ಕಂಚಿಕೇರಿ, ಸುನಿಲ್ ಪ್ರಶಾಂತ್ ಗೋಪಾಲ ದುರಗೋಜಿ, ಧರಣೇಂದ್ರ, ವಿನಯ್ , ಕಿರಣ್ ಭೂತೆ,  ಗಿರೀಶ್ ಎನ್, ಮಲ್ಲಿಕಾರ್ಜುನ, ಅಭಿಷೇಕ, ರಟ್ಟಿಹಳ್ಳಿ ಮಂಜುನಾಥ್  ಇತರರು ಹಾಜರಿದ್ದರು.

error: Content is protected !!