ಎಸ್ಸೆಸ್‌ – ಯಡಿಯೂರಪ್ಪ ವೀರಶೈವ – ಲಿಂಗಾಯತ ಸಮಾಜದ ಎರಡು ಕಣ್ಣುಗಳು

ಎಸ್ಸೆಸ್‌ – ಯಡಿಯೂರಪ್ಪ ವೀರಶೈವ – ಲಿಂಗಾಯತ ಸಮಾಜದ ಎರಡು ಕಣ್ಣುಗಳು

ದಾವಣಗೆರೆ, ಅ. 4- ವೀರಶೈವ – ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಸ್ಥಾನ-ಮಾನ ಕಲ್ಪಿಸುವಲ್ಲಿ ಅನ್ಯಾಯವಾಗಿದೆ ಎಂಬ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಶ್ರೀ ಪಂಚಪೀಠದ ಜಗದ್ಗುರುಗಳು ಬೆಂಬಲಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆಯನ್ನು ಉಜ್ಜಿನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರೀಶೈಲ ಪೀಠದ ಜಗದ್ಗುರು ಡಾ. ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಕಾಶೀ ಪೀಠದ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ನೀಡಿದ್ದಾರೆ ಎಂದು ಶ್ರೀಶೈಲ ಮಠದ ದಾವಣಗೆರೆ ಸಮಿತಿಯ ಗೌರವ ಕಾರ್ಯ ದರ್ಶಿ ಎನ್.ಎ. ಮುರುಗೇಶ್ ಆರಾಧ್ಯ ತಿಳಿಸಿದ್ದಾರೆ.

ಅಖಿಲ ಭಾರತ ವೀರಶೈವ – ಲಿಂಗಾಯತ ಸಮಾಜದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಎಸ್ಸೆಸ್, ವೀರಶೈವ – ಲಿಂಗಾಯತ ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ನೀಡಿ ರುವ ಹೇಳಿಕೆ ಸ್ವಾಗತಾರ್ಹ ಎಂದು ಜಗದ್ಗುರುಗಳು ಹೇಳಿದ್ದಾರೆ.

ಶಿವಶಂಕರಪ್ಪ ಅವರ ಹೇಳಿಕೆಯನ್ನು ಬೆಂಬಲಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೂಡ ವೀರಶೈವ – ಲಿಂಗಾಯತ ಸಮಾಜದ  ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿದ್ದು, ಎಸ್ಸೆಸ್‌ ಮತ್ತು ಯಡಿಯೂರಪ್ಪ ಇಬ್ಬರೂ ಈ ಸಮಾಜದ ಎರಡು ಕಣ್ಣುಳಿದ್ದಂತೆ ಎಂದು ಜಗದ್ಗುರುಗಳು ಬಣ್ಣಿಸಿದ್ದಾರೆ.

ಈ ಹಿಂದೆ ವೀರಶೈವ-ಲಿಂಗಾಯತ ಒಡೆದು ಆಳುವ ನೀತಿ ಅನುಸರಿಸಿದ ಸಂದರ್ಭದಲ್ಲೂ, ಅಂತಹ ಹೇಳಿಕೆ ಮತ್ತು ನಡೆಯಬಹುದಾದ ಕ್ರಮಗಳನ್ನು ಬಲವಾಗಿ ಖಂಡಿಸಿ, ಸಮಾಜದ ಒಗ್ಗಟ್ಟಿಗೆ ಶ್ರಮಿಸಿದ್ದ ಎಸ್ಸೆಸ್ ಅವರ ಸಮಾಜದ ಕಳಕಳಿಯನ್ನು ಶ್ರೀಗಳು ಮೆಲುಕು ಹಾಕಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ವೀರಶೈವ – ಲಿಂಗಾಯತ ಸಮಾಜದ ವಿರುದ್ಧ ಆಗಾಗ್ಗೆ ನಡೆಯುತ್ತಲೇ ಇರುವ ಅನ್ಯಾಯ ಮತ್ತು ಒಡೆದು ಆಳುವ ನೀತಿಯ ಹೇಳಿಕೆಗಳು ಬಂದಾಗಲೆಲ್ಲಾ ಯಾವುದಕ್ಕೂ ಹೆದರದೆ, ಸಮಾಜದ ಶ್ರೇಯೋಭಿವೃದ್ಧಿಗಾಗಿ ಕಾಳಜಿ ವಹಿಸಿರುವ ಶಾಮನೂರು ಶಿವಶಂಕರಪ್ಪ ಅವರನ್ನು ಜಗದ್ಗುರುಗಳು ಅಭಿನಂದಿಸಿದ್ದಾರೆ.

error: Content is protected !!