ಕಸ ವಿಲೇವಾರಿಗೆ ಗಮನಿಸುವಿರಾ?

ಕಸ ವಿಲೇವಾರಿಗೆ ಗಮನಿಸುವಿರಾ?

ಮಾನ್ಯರೇ,

ದಾವಣಗೆರೆ ನಗರದ ಎಂಸಿಸಿ ಎ ಬ್ಲಾಕ್‌ನ ಖಾಲಿ ನಿವೇಶನದಲ್ಲಿ ಭಾರೀ ಕಸದ ರಾಶಿ ಬಿದ್ದಿದೆ. ಆದರೂ ಪಾಲಿಕೆ ಸಿಬ್ಬಂದಿ ಸ್ವಚ್ಛತಾ ಕ್ರಮ ತೆಗೆದುಕೊಂಡಿಲ್ಲ. ಇಲ್ಲಿನ ಪೊದೆಗಳಲ್ಲಿ ಇಲಿ ಹಾಗೂ ಹಾವುಗಳು ಸೇರಿಕೊಂಡಿವೆ. ಮಹಾತ್ಮಾ ಗಾಂಧೀಜಿ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿರುವ ಸ್ವಚ್ಛ ಭಾರತ ಅಭಿಯಾನದ ಸಂದರ್ಭದಲ್ಲಾದರೂ ಈ ಕಸ ನಿವಾರಣೆ ಕಡೆಗೆ ಸಂಬಂಧಪಟ್ಟವರು ಗಮನ ಹರಿಸಲಿ.


– ಶರಣಪ್ಪ, ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್.

error: Content is protected !!