ಕಾವೇರಿಗಾಗಿ ದಾವಣಗೆರೆ ಭಾಗಶಃ ಬಂದ್

ಕಾವೇರಿಗಾಗಿ ದಾವಣಗೆರೆ ಭಾಗಶಃ ಬಂದ್

ದಾವಣಗೆರೆ, ಸೆ. 29- ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ದಾವಣಗೆರೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಕೆಎಸ್ಸಾರ್ಟಿಸಿ ಬಸ್‌ಗಳೂ ಸಂಚರಿಸಿದವು. ಆದರೆ ಖಾಸಗಿ ಬಸ್‌ಗಳ ಸಂಖ್ಯೆ ವಿರಳವಾಗಿತ್ತು. 

ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‌ಗಳು ಹೊರಡಲು ಸಜ್ಜಾಗಿದ್ದರೂ, ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಮಧ್ಯಾಹ್ನ 12ರ ನಂತರವೇ ಒಂದಿಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಗ್ರಾಮಾಂತರ ಪ್ರದೇಶಗಳಿಗೆ ಕೆಲ ಬಸ್‌ಗಳು ಹೊರಟವು.

ಮಂಡಿಪೇಟೆ, ಗಡಿಯಾರ ಕಂಬ, ಚಾಮರಾಜ ಸರ್ಕಲ್ ಬಳಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಪರಿಸ್ಥಿತಿ ಯಥಾಸ್ಥಿತಿಯಲ್ಲಿತ್ತು. ಬಸ್‌ಗಳು ಸಂಚರಿಸಿದವು. ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗಲಿಲ್ಲ. ನಗರದಲ್ಲಿ ಆಟೋಗಳ ಸಂಚಾರ ಎಂದಿನಂತಿತ್ತು. 

ಬೆಳಿಗ್ಗೆಯಿಂದಲೇ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ವಹಿವಾಟು ನಡೆಸದೇ ಬಂದ್‌ಗೆ  ಸಹಕರಿಸುವಂತೆ ಮನವಿ ಮಾಡುತ್ತಿದ್ದರು. ಜಯದೇವ ವೃತ್ತ, ಅಶೋಕ ರಸ್ತೆ, ಹದಡಿ ರಸ್ತೆ, ಗಾಂಧಿ ವೃತ್ತ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕನ್ನಡ ಪರ ಸಂಘಟನೆಗಳ ಒಕ್ಕೂಟದ ಕೆ.ಜಿ. ಶಿವಕುಮಾರ್, ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್, ಹೆಚ್.ಜಿ. ಉಮೇಶ್, ಐರಣಿ ಚಂದ್ರು, ಬಿ.ಪ್ರವೀಣ್, ನಾಗರಾಜ್, ನಿಂಗಪ್ಪ, ಹನುಮಂತಪ್ಪ,  ನಿಂಗಣ್ಣ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಈ ವೇಳೆ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿ.ಅವಿನಾಶ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಾಲಾ ನಾಗರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್., ಫಯಾಜ್ ಅಹ್ಮದ್, ಚಮನ್ ಶರೀಫ್, ಈರಣ್ಣ ಎನ್.ಎಸ್., ಗೌಸ್‌ ಪೀರ್, ಶಾಂತಮ್ಮ, ಮಮ್ತಾಜ್, ನಾಗರಾಜ್, ಕೆ.ಹುಲಿಕುಂಟೇಶ್ವರ್, ಸುಲೇಮಾನ್, ನಿಂಗರಾಜ್, ಜೆ.ಜಗದೀಶ್, ಶರಣೇಶ್, ಶರಣಪ್ಪ ಅಂಬಾರಿ, ನಟರಾಜ್, ಹನುಮಂತಪ್ಪ, ಅಕ್ಬರ್ ಭಾಷಾ, ಸುನಿತ್ ಇತರರು ಈ ಸಂದರ್ಭದಲ್ಲಿದ್ದರು.

ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟ, ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ರಾಜರತ್ನ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ ಕರ್ನಾಟಕ ಬಂದ್‌ ಬೆಂಬಲಿಸಿ ದಾವಣಗೆರೆ ಜಯದೇವ ವೃತ್ತದಲ್ಲಿ  ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧ್ಯಕ್ಷ ಯೋಗೇಶ್, ಪದಾಧಿಕಾರಿಗಳಾದ ಜಿ.ಸಿ. ಶ್ರೀನಿವಾಸ್, ಶಿವಕುಮಾರ್, ಧರ್ಮರಾಜ್, ಮುರಳಿ, ಪರಶುರಾಮ್, ಅಜಯ್, ಅಂಜಿನಪ್ಪ ಇತರರು ಇದ್ದರು.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯಿಂದಲೂ ಪ್ರತಿಭಟನೆ ನಡೆಸಲಾಯಿತು. ರಾಜ್ಯಾಧ್ಯಕ್ಷ ನಿಂಗರಾಜ್‌ಗೌಡ್ರು, ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆ ಎನ್.ಎಸ್. ಸುವರ್ಣಮ್ಮ, ನಾಗವೇಣಿ, ಕಸ್ತೂರಮ್ಮ, ಸುಜಾತ, ಭಾಗ್ಯಲಕ್ಷ್ಮಿ, ಸುನಿತಾ, ರೇಖಾ, ಶಾಂತಮ್ಮ, ಯಶೋಧಮ್ಮ, ಅನುಷಾ, ಆಶಾ, ಮಂಜುನಾಥ್ ಅಣಜಿ, ಶಿವಕುಮಾರ್ ಅಣಜಿ, ರಾಘವೇಂದ್ರ, ನಾಗರಾಜ ಅಣಜಿ, ರಘು ಇತರರಿದ್ದರು.

ಜೈ ಕರುನಾಡ ವೇದಿಕೆ ಜಿಲ್ಲಾ ಘಟಕದಿಂದ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷ, ಡಿ.ಎಸ್.ಕೆ. ಪರಶುರಾಮ್,  ಜಿಲ್ಲಾಧ್ಯಕ್ಷ ಪರಶುರಾಮ ನಂದಿಗಾವಿ, ಪ್ರಧಾನ ಕಾರ್ಯದರ್ಶಿ ಇ.ಮಂಜುನಾಥ್ ಬಾಳೆಕಾಯಿ ಹಾಗೂ ಪದಾಧಿಕಾರಿಗಳು ಇದ್ದರು.

ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಜಿಲ್ಲಾ ಸಮಿತಿ ನಡೆಸಿದ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಕೆ.ಎಂ. ಚನ್ನಬಸಪ್ಪ ಇತರರಿದ್ದರು.

ಕನ್ನಡ ಚಳವಳಿ ಕೇಂದ್ರ ಸಮಿತಿ, ಡಾ. ರಾಜ್ ಅಭಿಮಾನಿಗಳ ಸಂಘ, ಅಖಂಡ ಕರ್ನಾಟಕ ರಕ್ಷಣಾ ವೇದಿಕೆ, ಕರವೇ (ಪ್ರವೀಣ ಶೆಟ್ಟಿ ಬಣ), ಜಯ ಕರ್ನಾಟಕ, ಜೈ ಕರುನಾಡ ವೇದಿಕೆ, ಗಜ ಸೇನೆ, ಸುವರ್ಣ ಕರ್ನಾಟಕ ವೇದಿಕೆ, ಶಂಕರ್‌ನಾಗ್ ಅಭಿಮಾನಿಗಳ ಆಟೋ ಬಳಗ, ದಲಿತ ಸೇನೆ, ದಲಿತ ಸೇನಾ ಸಮಿತಿ, ಕರ್ನಾಟಕ ನವ ನಿರ್ಮಾಣ ಸೇನೆ, ಸ್ನೇಹ ಸಂಘ, ಕರ್ನಾಟಕ ಕದಂಬ ಸೇನೆ, ಕನ್ನಡ ನಾಡು ಸಮರ ಸೇನೆ, ದಾವಣಗೆರೆ ಕಟ್ಟಡ ಕಾರ್ಮಿಕರ ಅಸಂಘಟಿತ ವೇದಿಕೆ, ವಿಷ್ಣು ಸೇನಾ ಸಮಿತಿ, ಕರ್ನಾಟಕ ಕನ್ನಡ ಸೇನೆ, ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಜೈ ಕರುನಾಡ ವೇದಿಕೆ, ರೈತ ಸಂಘ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಸೇರಿದಂತೆ ಹಲವು ಸಂಘಟನೆಗಳು ಬಂದ್‌ ಬೆಂಬಲಿಸಿ ಪ್ರತಿಭಟನೆ ನಡೆಸಿದವು.

error: Content is protected !!