ಎಸ್ಸೆಸ್‌ಗೆ `ಹಾನಗಲ್ ಕುಮಾರೇಶ್ವರ ಪ್ರಶಸ್ತಿ’ ಪ್ರದಾನ

ಎಸ್ಸೆಸ್‌ಗೆ `ಹಾನಗಲ್ ಕುಮಾರೇಶ್ವರ ಪ್ರಶಸ್ತಿ’ ಪ್ರದಾನ

ವೀರಶೈವ-ಲಿಂಗಾಯತ ಸಮುದಾಯಕ್ಕೆ ಹಾನಗಲ್ ಶ್ರೀಗಳ ಕೊಡುಗೆ ಅಪಾರ  

– ಶಾಸಕ ಎಸ್ಸೆಸ್

ಬೆಂಗಳೂರು, ಸೆ. 28- ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು ಜಿಲ್ಲಾ ಘಟಕದಿಂದ ನೀಡುವ ‘ಹಾನಗಲ್ ಕುಮಾರೇಶ್ವರ ಪ್ರಶಸ್ತಿ’ಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರೂ ಆಗಿರುವ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಇಂದಿಲ್ಲಿ ಪ್ರದಾನ ಮಾಡಲಾಯಿತು.

ಜಗದ್ಗುರು ರೇಣುಕಾಚಾರ್ಯ ಮಹಾ ವಿದ್ಯಾಲಯದ ಷರಾಫ್ ಬಸಪ್ಪ ಸಭಾಂಗಣ ದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಸ್ಸೆಸ್ ಅವರಿಗೆ ಪ್ರಶಸ್ತಿಯೊಂದಿಗೆ  51 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್ಸೆಸ್, ಹಾನಗಲ್ ಕುಮಾರೇಶ್ವರ ಮಹಾಸ್ವಾಮಿಗಳವರು ವೀರಶೈವ-ಲಿಂಗಾಯತ ಸಮುದಾಯವನ್ನು 100 ವರ್ಷಗಳ ಹಿಂದೆಯೇ ಸಂಘಟಿಸಿ, ಅನೇಕ ಸಂಘ-ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಮುದಾಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಹಾನಗಲ್ ಕುಮಾರೇಶ್ವರ ಮಹಾಸ್ವಾಮಿಗಳವರು ಹಾಕಿಕೊಟ್ಟ ಮಾರ್ಗದರ್ಶನದಲ್ಲೇ ಮಹಾಸಭಾ ಮುಂದುವರೆದಿದ್ದು, ಅಂತಹವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಪಡೆದ ನಾನು ಇನ್ನಷ್ಟು ಸಮಾಜಮುಖಿ ಕೆಲಸ ಮಾಡಲು ಸ್ಫೂರ್ತಿ ಸಿಕ್ಕಿದೆ ಎಂದು ತಿಳಿಸಿದ ಅವರು, ವೀರಶೈವ-ಲಿಂಗಾಯತ ಎಲ್ಲಾ ಒಳಪಂಗಡ ಗಳನ್ನು ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಶಿವಮೊಗ್ಗ ಜಿಲ್ಲೆಯ ಹೊಸನಗರದ ಮೂಲೆಗದ್ದೆ ಮಠದ ಶ್ರೀ ಚನ್ನಬಸಪ್ಪ ಸ್ವಾಮೀಜಿ, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಮಹಾಸಭಾ ಕಾರ್ಯ ದರ್ಶಿ ರೇಣುಕಾ ಪ್ರಸನ್ನ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಸ್. ಗುರುಸ್ವಾಮಿ ಹಾಗೂ  ಇತರರು ಭಾಗವಹಿಸಿದ್ದರು.

error: Content is protected !!