ಜಿ.ಪಂ. ನಲ್ಲೊಂದು ಪುಟ್ಟ ವಾಚನಾಲಯ

ಜಿ.ಪಂ. ನಲ್ಲೊಂದು ಪುಟ್ಟ ವಾಚನಾಲಯ

ಮಾನ್ಯರೇ, 

ಕಳೆದೆರಡು ದಿನದ ಹಿಂದೆ ಕೆಲಸದ ಮೇಲೆ ದಾವಣಗೆರೆ  ಜಿಲ್ಲಾ ಪಂಚಾಯ್ತಿ ಕಾರ್ಯಾ ಲಯಕ್ಕೆ ಬೇಟಿ ನೀಡಿದ್ದೆ – ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಕಛೇರಿಗೆ ಹೊಂದಿಕೊಂಡಂತಿರುವ ಕಾರಿಡಾರ್‌ನಲ್ಲಿ,  ಪುಟ್ಟದೊದು ಗ್ರಂಥ ಭಂಡಾರ ಹಾಗೂ ಕುಳಿತು ಓದಲು ನಾಲ್ಕು ಖುರ್ಚಿಗಳನ್ನು ಇಡಲಾಗಿತ್ತು. ಕುತೂಹಲದಿಂದ ಗಮನಿಸಿ, ಅಟೆಂಡರ್ ಕೇಳಿದೆ ಇದು ನಮಗ ಎಂದು ಹೂ.. ಸಾರ್.. ಸಾಹೇಬರು, ಸಂದರ್ಶಕರಿಗೆ ಅನುಕೂಲವಾಗಲೆಂದು ಮಾಡಿಸಿದ್ದಾರೆ. ತಕ್ಕೊಂಡು ಓದಿ ಸಾ ಎಂದರು. ಖುಷಿ ಅನಿಸಿತು. 

ಹಿಂದೆ ಅನೇಕ ಬಾರಿ ಬಂದಾಗ ಗಂಟೆಗಟ್ಟಲೇ ಕಾಯ್ದು ಸಿ.ಎಸ್‌. ಸಾಹೇಬರನ್ನು ಭೇಟಿಯಾಗಿದ್ದೆ. ಇಂದು ನನಗೆ ಕಾಯ್ದ ಅನುಭವವಾಗಲಿಲ್ಲ, ಕಾರಣ ಎದುರು ಪುಸ್ತಕ ಭಂಡಾರವಿತ್ತು. ಚಿಕ್ಕದೊಂದು ಪುಸ್ತಕ ತೆಗೆದು ಕಣ್ಣಾಡಿಸಿದೆ. ಅಷ್ಟರಲ್ಲಿ, ನನಗೆ ಸಂದರ್ಶನಕ್ಕೆ ಕರೆ ಬಂತು. ಒಳಹೋಗಿ ಸಿ.ಎಸ್‌. ಅವರಿಗೆ ಓದುಗರಿಗೆ ಗ್ರಂಥ ಭಂಡಾರ ಏರ್ಪಡಿಸಿರುವುದಕ್ಕೆ ಧನ್ಯವಾದ ಹೇಳಿ ಅಭಿನಂದಿಸಿದೆ. 

ಸಂದರ್ಶಕರ ಸಂಖ್ಯೆ ಜಾಸ್ತಿ ಇದ್ದಾಗ ಸಾರ್ವಜನಿಕರು ಕಛೇರಿ ಕೆಲಸದ ಮೇಲೆ ಬಂದಾಗ ಹಾಳು ಹರಟೆ ಮಾತು ಬಿಟ್ಟು ಪುಸ್ತಕದ ಉಪಯೋಗ ಪಡೆಯಲೆಂದು ಅನೇಕ ಉಪಯುಕ್ತ ಮಾಹಿತಿ ಒದಗಿಸುವ, ಚಿಕ್ಕ ಹಾಗೂ ದೊಡ್ಡ ಪುಸ್ತಕಗಳನ್ನು ಇಟ್ಟು ಅನುಕೂಲ ಮಾಡಿರುವುದನ್ನು ಸಾರ್ವಜನಿಕ ಓದುಗರು ಸಿ.ಇ.ಓ. ರವರ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲ್ಯಾಘಿಸಿದ್ದಾರೆ.


– ಎಂ. ಧರ್ಮಪ್ಪ

error: Content is protected !!