ಹರಿಹರ ತುಂಗಭದ್ರಾ ಸೊಸೈಟಿಗೆ 4.02 ಕೋಟಿ ಲಾಭ

ಹರಿಹರ ತುಂಗಭದ್ರಾ ಸೊಸೈಟಿಗೆ 4.02 ಕೋಟಿ ಲಾಭ

ಹರಿಹರ, ಸೆ. 23 – ನಗರದ ದಿ ತುಂಗಭದ್ರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 2022-23 ನೇ ಸಾಲಿನಲ್ಲಿ 4 ಕೋಟಿ 2 ಲಕ್ಷ ರೂಪಾಯಿ ದಾಖಲೆಯ ಲಾಭವನ್ನು ಗಳಿಸಿದ್ದು, ಷೇರುದಾರರಿಗೆ ಶೇ. 16 ರಂತೆ ಡಿವಿಡೆಂಡ್ ನೀಡಲಿದೆ ಎಂದು ಸೊಸೈಟಿ ಅಧ್ಯಕ್ಷ ಎಂ. ಶಿವಾನಂದಪ್ಪ ಹಲಸಬಾಳು ಹೇಳಿದರು.

ನಗರದ ಹೆಚ್.ಕೆ. ವೀರಪ್ಪ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆದ ದಿ ತುಂಗಭದ್ರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 39 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೊಸೈಟಿಯಲ್ಲಿ ಸದಸ್ಯರು 5,265 ಇದ್ದು, ಅವರಲ್ಲಿ 2,631 ಜನ ಸಹ ಸದಸ್ಯರು. ಪ್ರಾರಂಭದಲ್ಲಿ 3,05,34,586 ಷೇರು ಬಂಡವಾಳವಿದ್ದು, ಅಂತ್ಯಕ್ಕೆ 3,09,44,886 ರೂಪಾಯಿ ಹೊಂದಿರುತ್ತದೆ. 

ಕಳೆದ ವರ್ಷದ ಕೊನೆಯಲ್ಲಿ ರೂ 68,47,09,300-14 ಬರಬೇಕಾದ ಸಾಲಗಳಿದ್ದು, ಈ ಸಾಲಿಗೆ ರೂ. 70,59,60,493-34 ಆಗಿರುತ್ತದೆ. ಈ ಸಾಲಿನಲ್ಲಿ ರೂ. 1,07,77,460 ಗಳಷ್ಟು ಸುಸ್ತಿ ಬಾಕಿ ಇದ್ದು, 47,19,209 ರೂ. ಗಳ ಮೇಲೆ ಸಹಕಾರಿ ಸಂಘದ ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸಲಾ ಗಿದ್ದು, ಸುಸ್ತಿ ಸಾಲದ ಪ್ರಮಾಣ ಶೇ. 1.54 ರಷ್ಟು ಇರುತ್ತದೆ ಎಂದರು.

ಸಂಘವು ಸುಮಾರು 261 ಕೋಟಿಗೂ ಹೆಚ್ಚು ವಹಿವಾಟು ಮಾಡಿ 4.02 ಕೋಟಿಗೂ ಮೀರಿ ಲಾಭವನ್ನು ಗಳಿಸಿ ಎ ವರ್ಗದ ಶ್ರೇಣಿಯನ್ನು ಕಾಯ್ದುಕೊಂಡಿದೆ ಎಂದವರು ಹೇಳಿದರು.

ಈ ವೇಳೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

2022-23 ನೇ ಸಾಲಿನ ವಾರ್ಷಿಕ ವರದಿಯನ್ನು ವ್ಯವಸ್ಥಾಪಕ ಬಿ.ಜಿ. ಶರತ್ ಓದಿದರು. 

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಆರ್.ಕೆ. ಮಂಜುನಾಥ್, ನಿರ್ದೇಶಕರಾದ ಡಿ. ಹೇಮಂತರಾಜ್, ಜಿ.ಎಸ್. ಚನ್ನಬಸಪ್ಪ, ಸೈಯದ್ ಇಫ್ತೇಕಾರ್ ಆಹ್ಮದ್, ಬಿ ಮಂಜಪ್ಪ, ಪಿ. ಶಿವಣ್ಣ, ಎಂ. ಹನುಮಂತಪ್ಪ, ಪ್ರಕಾಶ್ ದಿವಟೆ, ಕೆ.ಬಿ. ಮಂಜುನಾಥ್, ಸಂಜಯ್ ಮಂಜುನಾಥ್, ಎಲ್.ಪಿ. ಮಮತ, ಎ.ಬಿ. ಗಂಗಮ್ಮ,  ವಿಶೇಷ ಆಹ್ವಾನಿತರಾಗಿ ಶರಣಪ್ಪ ಕೆ,ಹೆಚ್. ಪಾಲಾಕ್ಷಪ್ಪ, ವ್ಯವಸ್ಥಾಪಕ ಜಿ.ಬಿ. ಶರತ್ ಸಿಬ್ಬಂದಿಗಳಾದ ಜಿ.ಎಂ. ಗಾಯತ್ರಿ, ಎ.ಎನ್. ರಾಧ, ಕೆ. ಲಿಂಗರಾಜ್, ಡಿ.ಈ. ಸಂತೋಷ ಕುಮಾರ್, ಜಿ.ಆರ್. ವಿನಾಯಕ, ವಿಶ್ವನಾಥ ಜಿ.ಆರ್, ಪಿಗ್ಮಿ ಸಂಗ್ರಾಹಕರಾದ ಜಿ.ಎಂ. ಮೋಹನ್, ಹಾಲೇಶಪ್ಪ ಜಿ, ಎಂ.ಬಿ. ಮಹೇಂದ್ರ, ಹೆಚ್.ಎಂ. ಆಂಜನೇಯ, ಹೆಚ್.ವೈ. ಮಾರುತಿ, ನಾಗರಾಜ್ ದೇವರಳ್ಳಿ, ಎಂ. ಹನುಮಂತಪ್ಪ, ಎನ್.ಎಸ್. ಉಮೇಶ್, ಕೆ.ಸಿ. ಶಿವಶಂಕರ್, ಕೆ.ಬಿ. ಶಿವಕುಮಾರ್, ಎನ್.ಸಿ. ವಿಜಯಕುಮಾರ್, ಎಸ್.ಎನ್. ಬಸವರಾಜ್, ಹೆಚ್.ಕೆ. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!