ಶ್ರೀಕೃಷ್ಣ ಜನ್ಮಾಷ್ಟಮಿ

ಶ್ರೀಕೃಷ್ಣ ಜನ್ಮಾಷ್ಟಮಿ

ದಾವಣಗೆರೆಯ ಈಶ್ವರಮ್ಮ ಶಾಲೆಯಲ್ಲಿ  ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೃಷ್ಣನ ವೇಷ ಧರಿಸಿ ಬಂದ ಪುಟಾಣಿಯ ಸಂತಸ.

ದಾವಣಗೆರೆ, ಸೆ.6- ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ನಗರದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.   ಶ್ರಾವಣ ಮಾಸದ ಅಷ್ಟಮಿಯ ಶುಭ ದಿನದಿಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸುವ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡಿದ್ದು ಬಂದಿದೆ. ಜನತೆ ಸಡಗರ ಸಂಭ್ರಮದಿಂದ ಶ್ರೀ ಕೃಷ್ಣನ ಸ್ಮರಣೆ ಮಾಡುತ್ತಿದ್ದಾರೆ.

ಈ ಹಬ್ಬವನ್ನು ಗೋಕುಲಾಷ್ಟಮಿ, ಕೃಷ್ಣಾಷ್ಟಮಿ ಅಥವಾ ಶ್ರೀ ಜಯಂತಿ ಎಂದು ಕರೆಯಲಾಗುತ್ತದೆ. ವಿಷ್ಣುವಿನ ಎಂಟನೇ ಅವತಾರವಾದ ಕೃಷ್ಣನ ಜನ್ಮ ದಿನವನ್ನು ಇದು ಸೂಚಿಸುತ್ತದೆ.

ಶ್ರೀ ಕೃಷ್ಣ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಮನೆಗಳಲ್ಲೂ ಶ್ರೀ ಕೃಷ್ಣನನ್ನು ಆರಾಧಿಸಲಾಯಿತು. ಇತ್ತ ಶಾಲೆಗಳಲ್ಲಿ ಚಿಕ್ಕ ಮಕ್ಕಗಳಿಗೆ ಶ್ರೀ ಕೃಷ್ಣ ಹಾಗೂ ರಾಧೆಯವರ ವೇಷ ತೊಡಿಸಿ ಸಂತಸ ಪಡಲಾಗುತ್ತದೆ.  ತಮ್ಮ ಮಕ್ಕಳನ್ನು ಕೃಷ್ಣ ರಾಧೆಯರ ವೇಷದಲ್ಲಿ ನೋಡುವುದೇ ಪೋಷಕರಿಗೆ ಸಂಭ್ರಮ.

ನಗರದ ಹಲವಾರು ಖಾಸಗಿ ಶಾಲೆಗಳಲ್ಲಿ ಚಿಕ್ಕ ಮಕ್ಕಳ ರಾಧಾ-ಕೃಷ್ಣರ ವೇಷ ತೊಟ್ಟು ಹೋಗುತ್ತಿದ್ದುದು ಸಾಮಾನ್ಯವಾಗಿತ್ತು. ವೇಷಕ್ಕೆ ಬೇಕಾದ ಸಾಮಗ್ರಿಗಳ ಖರೀದಿಯೂ ನಡೆಯಿತು.

error: Content is protected !!