ಕಾನೂನು ಕೋರ್ಸ್‌ಗಳಿಗೆ ಯುವಕ-ಯುವತಿಯರ ಸೇರ್ಪಡೆ ಸ್ವಾಗತಾರ್ಹ

ಕಾನೂನು ಕೋರ್ಸ್‌ಗಳಿಗೆ ಯುವಕ-ಯುವತಿಯರ ಸೇರ್ಪಡೆ ಸ್ವಾಗತಾರ್ಹ

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ

ದಾವಣಗೆರೆ,  ಆ.29- ನ್ಯಾಯಾಧೀಶರು ಅತ್ಯುತ್ತಮ ಮತ್ತು ಗುಣಾತ್ಮಕವಾದ ತೀರ್ಪು ನೀಡುವ ಸಾಮರ್ಥ್ಯ ಮತ್ತು ಅವಕಾಶ ಹೊಂದಿರುತ್ತಾರೆ. ಇದು ನ್ಯಾಯಾಧೀಶರ ಹುದ್ದೆಯ ಮಹತ್ವವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಹೇಳಿದರು. 

ನಗರದ ವಕೀಲರ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾ ವಕೀಲರ ಸಂಘದ ವತಿಯಿಂದ ಇಂದು ಏರ್ಪಾಡಾಗಿದ್ದ, ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂ ಡಿರುವ ವಕೀಲರಾದ ಹೆಚ್.ಎಸ್. ಕಾವ್ಯಶ್ರಿ ಅವರ ಅಭಿನಂದನಾ ಸಮಾರಂ ಭದಲ್ಲಿ ಅವರು ಮಾತನಾಡಿದರು.

ಕಾಲಕ್ಕೆ ಹೋಲಿಕೆ ಮಾಡಿದರೆ ಈಗ ನ್ಯಾಯಾಂಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿದ್ದು, ಯಾವುದೇ ರಾಜ್ಯದಲ್ಲಿ ನೋಡಿದರು ಶೇ. 40 ರಷ್ಟು ನ್ಯಾಯಾಧೀಶರು  ಮಹಿಳೆಯರಾಗಿದ್ದಾರೆ ಎಂದರು.

ಅತ್ಯಂತ ಸ್ಪರ್ಧಾತ್ಮಕ ಪ್ರತಿಭಾನ್ವಿತ, ಬುದ್ಧಿವಂತಿಕೆ ಹೊಂದಿರುವ ಯುವಕ-ಯುವತಿಯರು ಕಾನೂನು ಕೋರ್ಸ್‍ಗ ಳಿಗೆ ಸೇರ್ಪಡೆಯಾಗುತ್ತಿರುವುದು ಸ್ವಾಗತಾರ್ಹ ಎಂದು ತಿಳಿಸಿದರು. 

ವಕೀಲರಾದ ಕಾವ್ಯಶ್ರೀ ನ್ಯಾಯಾಧೀ ಶರಾಗಿ ನೇಮಕಗೊಂಡು ನ್ಯಾಯಾಧೀಶರ ಬಳಗಕ್ಕೆ ಸೇರ್ಪಡೆಯಾಗಿರುವುದು ಸ್ವಾಗತಾರ್ಹ ಎಂದರು. 

ಹಿರಿಯ ನ್ಯಾಯವಾದಿ ರಾಮಚಂದ್ರ ಕಲಾಲ್ ಮಾತನಾಡಿ, ಕಠಿಣ ಪರಿಶ್ರಮ, ಭಾಷೆ ಮೇಲಿನ ಹಿಡಿತ ಮತ್ತು ನಿರಂತರ ಓದಿನ ಮೂಲಕ ವಕೀಲರು ತಮ್ಮ ಪಾಂಡಿತ್ಯವನ್ನು ಸಾಬೀತುಪಡಿಸಲು ಅವಕಾಶಗಳಿದ್ದು, ಕಾವ್ಯಶ್ರೀ ತಮ್ಮ ನಿರಂತರ ಪರಿಶ್ರಮದ ಮೂಲಕ ಮತ್ತು ವೃತ್ತಿಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವ ಮೂಲಕ ಸಿವಿಲ್ ಜಡ್ಜ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಅವರ ವೃತ್ತಿ ಜೀವನ ಯಶಸ್ವಿಯಾಗಲಿ ಎಂದು ಶುಭ ಕೋರಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹೆಚ್.ಎಸ್. ಕಾವ್ಯಶ್ರೀ ಅವರು, ತಮ್ಮ ಹಿರಿಯ ವಕೀಲರು ಹಾಗೂ ಜಿಲ್ಲಾ ವಕೀಲರ ಸಂಘವು ತಮಗೆ ನೀಡಿದ ಸಹಕಾರವನ್ನು ಸ್ಮರಿಸಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ  ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‍ಕುಮಾರ್, ವಕೀಲರು ತಮ್ಮ ಪ್ರತಿಭೆಯ ಮೂಲಕ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಗಳಲ್ಲಿ ಅವಕಾಶಗಳನ್ನು ಪಡೆದು ಜಿಲ್ಲಾ  ವಕೀಲರ ಸಂಘದ ಘನತೆ ಮತ್ತು ಗೌರವವನ್ನು  ಹೆಚ್ಚಿಸಿದರೆ ನೂತನವಾಗಿ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಕಾವ್ಯಶ್ರೀ ಅವರು ವಕೀಲಿ ವೃತ್ತಿಯ ಜೊತೆಗೆ ರಂಗಭೂಮಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿಸಿ ಅವರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿ ಪಡೆಯಲಿ ಎಂದು ಅಭಿನಂದಿಸಿದರು. 

ಜಿಲ್ಲಾ  ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣನವರ್, ನ್ಯಾಯಾಧೀಶರಾದ ಶಿವಪ್ಪ ಸಲಗೆರೆ, ರೇಷ್ಮಾ, ಅಫ್ತಾಬ್, ಸಮೀರ್ ಕೊಳ್ಳಿ, ಮಲ್ಲಿಕಾರ್ಜುನ್, ಸಿದ್ಧರಾಜು, ನಾಜಿಯಾ ಕೌಸರ್, ಜಿಲ್ಲಾ ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಮಧುಸೂದನ್, ಎಲ್. ನಾಗರಾಜ್, ನೀಲಕಂಠಯ್ಯ, ಸಂತೋಷ್‍ಕುಮಾರ್, ವಾಗೀಶ್ ಕಟಗಿಹಳ್ಳಿಮಠ, ಚೌಡಪ್ಪ,  ಉಪಸ್ಥಿತರಿದ್ದರು.

ವಕೀಲರಾದ ನಿಶ್ಚಿತ ಪ್ರಾರ್ಥಿಸಿದರು. ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳ್ ಸ್ವಾಗತಿಸಿದರು, ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ್ ವಂದಿಸಿದರು. ಕಾರ್ಯದರ್ಶಿ ಎಸ್. ಬಸವರಾಜ್ ನಿರೂಪಿಸಿದರು.

error: Content is protected !!