ಬಗರ್ ಹುಕ್ಕುಂ ಸಾಗುವಳಿದಾರರಿಗೆ ವಿನಾಕಾರಣ ಕಿರುಕುಳ : ರೈತ ಸಂಘ ಆರೋಪ

ಬಗರ್ ಹುಕ್ಕುಂ ಸಾಗುವಳಿದಾರರಿಗೆ ವಿನಾಕಾರಣ ಕಿರುಕುಳ : ರೈತ ಸಂಘ ಆರೋಪ

ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೆ ನೀರು ತಲುಪಿಸಲು ಜಿಲ್ಲಾಡಳಿತ ವಿಶೇಷ ನಿಗಾ ವಹಿಸಬೇಕು : ಬಲ್ಲೂರು ರವಿಕುಮಾರ್

ಮಲೇಬೆನ್ನೂರು, ಆ.26- ಗೋಮಾಳ, ಸರ್ಕಾರಿ ಭೂಮಿ, ಅರಣ್ಯ ಪ್ರದೇಶದಲ್ಲಿ ಹಿಂದಿನಿಂದಲೂ ಭೂ ರಹಿತ ರೈತರು ಕೃಷಿ ಮಾಡುತ್ತಿದ್ದು, ಅಂತಹ ಬಡ ರೈತರು ಪಹಣಿ ನೀಡಲು ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ದೂರಿದರು.

ಅವರು ಬುಧವಾರ ಇಲ್ಲಿನ ನೀರಾವರಿ ಇಲಾಖೆ ಆವರಣದಲ್ಲಿ ನಡೆದ ಕೃಷಿ ಸಾಗುವಳಿದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಬಹರ್ ಹುಕುಂ ಸಾಗುವಳಿದಾರರಿಗೆ ವಿನಾ ಕಾರಣ ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದೆಂದು ರವಿಕುಮಾರ್ ಎಚ್ಚರಿಸಿದರು. ಜಿಲ್ಲೆಯ ಎಲ್ಲಾ ಕಡೆ ಬಿತ್ತನೆ ಮಾಡಲಾಗಿದ್ದ ಮೆಕ್ಕೆಜೋಳದ ಬೆಳೆ ಮಳೆ ಇಲ್ಲದೇ ಒಣಗಿ ಹೋಗಿದ್ದು, ಸರ್ಕಾರ ಕೂಡಲೇ ಅಂತಹ ರೈತರಿಗೆ ಪರಿಹಾರ ನೀಡಬೇಕು ಮತ್ತು
ದಾವಣಗೆರೆ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕು. 

ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೆ 100 ದಿನ ನೀರು ಒದಗಿಸಲು ಜಿಲ್ಲಾಡಳಿತ ವಿಶೇಷ ನಿಗಾವಹಿಸಬೇಕು ಮತ್ತು ಭೈರನಪಾದ ಏತ ನೀರಾವರಿ ಯೋಜನೆ ಜಾರಿಗೊಂಡರೆ, ಕೊನೆ ಭಾಗದ ರೈತರಿಗೆ ಅನುಕೂಲವಾಗಲಿದ್ದು, ಈ ಬಗ್ಗೆಯೂ ಜಿಲ್ಲಾಡಳಿತ ಸರ್ಕಾರಕ್ಕೆ ಪತ್ರ ಬರೆಯಬೇಕೆಂದು ರವಿಕುಮಾರ್ ಒತ್ತಾಯಿಸಿದರು.

ರೈತ ಸಂಘದ ಕೋಗಳಿ ಮಂಜುನಾಥ್, ಬೆಳಕೆರೆ ಬಸಣ್ಣ, ರೆಹಮಾನ್ ಸಾಬ್, ಹನುಮಂತಪ್ಪ, ಫೈಜುಲ್ಲಾ, ವಕೀಲ ಮಂಜುನಾಥ್ ಮತ್ತಿತರರು ಸಭೆಯಲ್ಲಿದ್ದರು.

error: Content is protected !!