ದಾವಣಗೆರೆ, ಆ.21- ತೋಳಹುಣಸೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಮಹಿಳೆ ಯರಿಗೆ 30 ದಿನಗಳ ಕಾಲ ಉಚಿತವಾಗಿ ಊಟ ಮತ್ತು ವಸತಿಯೊಂದಿಗೆ ಮೊಬೈಲ್ ರಿಪೇರಿ, ಮೋಟರ್ ವೈಂಡಿಂಗ್, ಪೋಟೋ ಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ ನೀಡಲಾಗುವುದು. ತರಬೇತಿ ಪಡೆಯಲು ಇಚ್ಚಿಸುವ 18 ರಿಂದ 45 ವರ್ಷ ವಯಸ್ಸಿನ ಮಹಿಳೆಯರು ಇದೇ ಆಗಸ್ಟ್ 31ರ ಒಳಗಾಗಿ ತರಬೇತಿ ಸಂಸ್ಥೆಗೆ ಭೇಟಿ ನೀಡಿ ನೇರವಾಗಿ ಹೆಸರನ್ನು ನೋಂದಾಯಿಸಬಹುದು. ಅಥವಾ ಈ ಕೆಳಗಿನ ದೂರವಾಣಿ ಮೂಲಕವೂ ಹೆಸರು ನೋಂದಾಯಿಸಬಹುದು. 79751 39332, 7019980484, 99641 11314, 9538395817, 94818 77076.
January 11, 2025