ದಾವಣಗೆರೆ, ಆ. 21- ಕಾಂಗ್ರೆಸ್‌ನಲ್ಲಿ 136 ಶಾಸಕರಿದ್ದು ಸರ್ಕಾರ ಸುಭದ್ರವಾಗಿದೆ. ಹೀಗಾಗಿ, ನಾವು ಬಿಜೆಪಿಯವರ ಥರ ಆಪರೇಷನ್ ಮಾಡಲ್ಲ. ನಮ್ಮ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬಂದಿರುವುದನ್ನು ನೋಡಿ, ಹಿಂದೆ ನಮ್ಮ ಪಕ್ಷದಿಂದ ಬಿಜೆಪಿ ಮತ್ತು ಜೆಡಿಎಸ್‌ಗೆ ಹೋದವರು ಹಾಗೂ ಆ ಪಕ್ಷದಲ್ಲಿ ಮೊದಲಿನಿಂದ ಇದ್ದ ಶಾಸಕರು ತಾವಾಗಿಯೇ ಬರುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು. ಐದು ವರ್ಷ ಯಾವುದೇ ಕೊಡುಗೆ ನೀಡದ ಬಿಜೆಪಿಯ ಶಕ್ತಿ ಕುಂದಿದೆ. ಹೀಗಾಗಿಯೇ, ಚುನಾವಣೆಯಲ್ಲಿ ಪ್ರಧಾನಿ ಮೋದಿ ಬಂದು ಗಲ್ಲಿ, ಗಲ್ಲಿ ತಿರುಗಿದರೂ 68 ಸೀಟು ದಾಟಲಿಲ್ಲ ಎಂದರು.
January 11, 2025