ಹರಪನಹಳ್ಳಿ, ಆ. 17 – ತಾಲ್ಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ಎಚ್.ವಿಶಾಲಮ್ಮ ಅವಿರೋಧವಾಗಿ ಆಯ್ಕೆಯಾದರು.
13 ಜನ ಸದಸ್ಯರಲ್ಲಿ 10 ಜನ ಸದಸ್ಯರು ಹಾಜರಿದ್ದು, ಬ್ಯಾಂಕ್‍ನ ಉಳಿದ ಅವಧಿಗೆ ಅಧ್ಯಕ್ಷ ಸ್ಥಾನ ಬಯಸಿ ವಿಶಾಲಾಕ್ಷಮ್ಮ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದರಿಂದ, ಇವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಸಹಕಾರ ಸಂಘಗಳ ಹಿರಿಯ ನಿರೀಕ್ಷಕರಾದ ಬಸಮ್ಮ ಕೆ.ಬಡಿಗೇರ್ ಘೋಷಿಸಿದರು. ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕ್‍ನ ಉಪಾಧ್ಯಕ್ಷ ಜಗದೀಶ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹೆಚ್. ಬಿ.ಪರಶುರಾಮಪ್ಪ, ಲಕ್ಷ್ಮಿಪುರ ಗ್ರಾ.ಪಂ. ಅಧ್ಯಕ್ಷ ಪಿ.ಟಿ.ಭರತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಅರಸಿಕೇರಿ ಬ್ಲಾಕ್ ಅಧ್ಯಕ್ಷ ಕಂಬ ತ್ತಳ್ಳಿ ಮಂಜುನಾಥ್, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಪ್ರೇಮ್ ಕುಮಾರ್, ಪಿಎಲ್‍ಡಿ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಮುತ್ತಿಗಿ ಜಂಬಣ್ಣ, ಪಿ.ಬೆಟ್ಟನಗೌಡ, ಮುಖಂಡರಾದ ಶಶಿಧರ್ ಪೂಜಾರ್, ಪಿಎಲ್‍ಡಿ ಬ್ಯಾಂಕ್‍ನ ಮಾಜಿ ಉಪಾಧ್ಯಕ್ಷ ಹೆಚ್.ದೇವರಾಜ್, ಬಿ.ವಾಗೀಶ್ ವೇದುನಾಯಕ್, ಅಲಮರಸಿಕೇರಿ ಪರಶುರಾಮ್, ಬೇಲೂರು ಸಿದ್ದೇಶ್, ಕೆ.ಭರಮನಗೌಡ, ನೂರುದ್ದೀನ್, ಭರತೇಶ್, ಚಿಗಟೇರಿ ಜಂಬಣ್ಣ, ಸುಮಂಗಳಮ್ಮ, ಪಿ.ಕೆ.ಮಹಾದೇವಪ್ಪ, ರಾಜಣ್ಣ, ಶಿವಕುಮಾರ್ ಗೌಡ ಸೇರಿದಂತೆ, ಇತರರಿದ್ದರು.