ವಿವಿಧೆಡೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ವಿವಿಧೆಡೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ದಾವಣಗೆರೆ, ಆ. 17- ನಗರ ಹಾಗೂ ನಗರದ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇ ಶದ  ವಿವಿಧೆಡೆ 77ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.

ದಾವಣಗೆರೆ

ಎ.ಆರ್.ಜಿ. ಕಾಲೇಜು : ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಬಿ. ಬೋರಯ್ಯ ಧ್ವಜಾರೋಹಣ ನೆರವೇರಿಸಿ ದರು.

ಸಮಾರಂಭಲ್ಲಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಬೊಮ್ಮಣ್ಣ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಜಿ.ಕೆ. ಮಲ್ಲಿಕಾರ್ಜುನಪ್ಪ, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಅನಿತಾಕುಮಾರಿ, ರಾಸೇಯೋ ಕಾರ್ಯಕ್ರಮಾಧಿಕಾರಿ ಡಾ. ಹೆಚ್.ಆರ್. ತಿಪ್ಪೇಸ್ವಾಮಿ, ಎನ್‌ಸಿಸಿ ಲೆಫ್ಟಿನೆಂಟ್ ರಮೇಶ್ ಪೂಜಾರ್, ಪ್ರೊ. ಪಿ. ರಶ್ಮಿ, ಪ್ರೊ. ಆನಂದ್, ಡಾ. ಚಮನ್‌ಸಾಬ್, ಬಸವರಾಜ ಕಲಕಟ್ಟಿ, ಕರಿಬಸಪ್ಪ, ವೆಂಕಟೇಶ, ರವಿ, ಉಮಾ, ಕವಿತಾ ಪಾಟೀಲ್, ಬೇಬಿ ಅನಿನಾ, ಗಣೇಶ್, ಸೌಮ್ಯ ಎಸ್. ಆಚಾರ್, ಜಾಕೀರ್, ಸಚಿನ್, ಅನುಸೂಯಮ್ಮ ಉಪಸ್ಥಿತರಿದ್ದರು.

ಸಿದ್ಧಗಂಗಾ ವಿದ್ಯಾಸಂಸ್ಥೆ : ಪ್ರಾಚಾರ್ಯ ರಾದ ವಾಣಿಶ್ರೀ ಭಾರತ ಮಾತೆ ಹಾಗೂ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದರು. ಕು. ಕೆ.ಎನ್. ಶ್ರೇಯಸ್, ಸಾನ್ವಿ ಎಲ್. ಜಗದಾಳೆ, ಗೌರಿಶಂಕರ,  ಸ್ವಾತಂತ್ರ್ಯ ಹೋರಾಟಗಾರರ ಕುರಿತು ಭಾಷಣ ಮಾಡಿದರು. 

ಸಂಸ್ಥೆಯ ನಿರ್ದೇಶಕ ಡಾ. ಡಿ.ಎಸ್. ಜಯಂತ್, ಕಾರ್ಯದರ್ಶಿ ಡಿ.ಎಸ್. ಹೇಮಂತ್ ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್  ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

ಅಭಿನಯ ಭಾರತಿ ವಿದ್ಯಾಸಂಸ್ಥೆ ಹಾಗೂ ಮಾನಸಗಂಗೋತ್ರಿ ಹಿ.ಪ್ರಾ.ಶಾಲೆ : ಮಲ್ಲಿ ಕಾರ್ಜುನಸ್ವಾಮಿ ತ್ಯಾವಣಗಿ ಧ್ವಜಾರೋಹಣ ನೆರವೇರಿಸಿದರು. ಸಂಸ್ಥಾಪಕರಾದ ಬಿ. ಭರಮ ಗೌಡರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಯೋಗಾನಂದ ಯೋಗ ಕೇಂದ್ರದ ಸರ್ವ ಸದಸ್ಯರು ಆಗಮಿಸಿದ್ದರು. ವಿದ್ಯಾರ್ಥಿನಿಯರಾದ ಲಕ್ಷ್ಮಿದೇವಿ, ಯೋಗ ಪ್ರದರ್ಶನ ನೀಡಿದರು. ರಾಜಪ್ಪ ಬಿ. ಕಾರ್ಯಕ್ರಮ ನಿರೂಪಿಸಿದರು. ಕೆ.ಎನ್. ಉಮೇಶ್ ಸ್ವಾಗತಿಸಿದರು. ರಹಮತ್‌ ಉಲ್ಲಾ ವಂದಿಸಿದರು.

ರಾಣೇಬೆನ್ನೂರು

ನ್ಯಾಷನಲ್ ಪಬ್ಲಿಕ್ ಶಾಲೆ : ಶಾಲೆಯ ನಿರ್ದೇಶಕ ಎಂ.ಎಂ. ಅನಂತರೆಡ್ಡಿ ಧ್ವಜಾರೋಹಣ ನೆರವೇರಿಸಿದರು.  ಶಾಲೆಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಮುರುಡಣ್ಣನವರ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ತುಳಜಪ್ಪ ಲದ್ವಾ, ಬಿ.ಆರ್. ಸಾವಕಾರ, ಮಲ್ಲಿಕಾರ್ಜುನ ಅಂಗಡಿ, ಶ್ರೀಮತಿ ವಜ್ರೇಶ್ವರಿ ವಿ. ಲದ್ವಾ, ಶ್ರೀ ರೇಣುಕಾ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿ ಲಿ. ಬ್ಯಾಂಕಿನ ವ್ಯವಸ್ಥಾಪಕರು, ನಿರ್ದೇಶಕರುಗಳು, ಶಾಲೆಯ ಪ್ರಾಂಶುಪಾಲ ಜಿ.ಎಸ್. ಪ್ರಕಾಶ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಅಫಜಾ ಬಳೆಗಾರ್, ಆಯುಷಾ ಜೈನ್ ಕಾರ್ಯಕ್ರಮ ನಿರೂಪಿಸಿ ದರು. ನೂರ್ ಹುರುಮತ್ ಸ್ವಾಗತಿಸಿದರು. ನಜರಿನ್ ಆರ್.ಕೆ. ವಂದಿಸಿದರು.

ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯ : ಡಾ. ಬಿ. ಶಿವಕುಮಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ರೋಟರಿ ಶಾಲೆ : ಶಾಲೆಯ ಅಧ್ಯಕ್ಷ ಜಯಣ್ಣ ಜಂಬಿಗಿ ಧ್ವಜಾರೋಹಣ ನೆರವೇರಿಸಿದರು. ಡಾ. ಬಿ.ಎಸ್‌. ಕೇಲಗಾರ, ಉಮೇಶ ಪಟ್ಟಣಶೆಟ್ಟಿ, ಎಸ್.ಕೆ. ಮಾಳಗಿ, ಶೋಭಾ ಜಂಬಗಿ, ಕುಮಾರ ಮುಷ್ಟಿ, ಕೆ.ವಿ. ಶ್ರೀನಿವಾಸ, ವಿ.ಪಿ. ಪೊಲೀಸಗೌಡ್ರ ಮತ್ತಿತರರು ಉಪಸ್ಥಿತರಿದ್ದರು.

ಕೃಷಿ ಪದವೀಧರರ ಸಂಘ : ಅಧ್ಯಕ್ಷ ಎನ್.ಹೆಚ್. ದೇವಕುಮಾರ್ ಧ್ವಜಾರೋಹಣ ನೆರವೇರಿಸಿದರು. ಸದಸ್ಯರಾದ ದೇವೇಂದ್ರಪ್ಪ, ಮುದೇಗೌಡ್ರ, ಉದಯಕುಮಾರ, ಅಶೋಕ ಬಿರಾದಾರ, ಮಂಜುನಾಥ, ರವೀಂದ್ರ, ಪ್ರಮೋದ ಮತ್ತಿತರರಿದ್ದರು.

ರೇನ್‌ ಬೋ ರೆಸಿಡೆನ್ಷಿಯಲ್ ಪಬ್ಲಿಕ್ ಸ್ಕೂಲ್ : ನಿವೃತ್ತ ಪ್ರಾಂಶುಪಾಲ ಎಸ್.ಎನ್. ಕಟ್ಟಿಮನಿ ಧ್ವಜಾರೋಹಣ ನೆರವೇರಿಸಿದರು.

ನಿವೃತ್ತ ಯೋಧ ನಾಗಪ್ಪ ತಿರುಕಪ್ಪ ಎರೆಮನಿ, ಬಸವರಾಜ ಹಾದಿಮನಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅತಿಥಿಗಳಾಗಿ ಅಧ್ಯಕ್ಷ ಡಾ. ಸಿ.ಟಿ. ಸುರೇಶ್, ಶ್ರೀಮತಿ ಲಲೀತಾ ಸುರೇಶ್, ಉಪಾಧ್ಯಕ್ಷ ಎಸ್.ಕೆ. ನಾಗರಾಜ್, ಖಜಾಂಚಿ ಐ.ಕೆ. ಮಾಲತೇಶ್,  ಸಿ.ಟಿ. ವೀರಣ್ಣ, ಶ್ರೀಮತಿ ಶಾರದಾ ವೀರಣ್ಣ, ಶ್ರೀಮತಿ ಐ.ಕೆ. ಶಾಂತಮ್ಮ, ಎನ್.ಟಿ. ರಾಜು ಉಪಸ್ಥಿತರಿದ್ದರು.

ಮೇಘನಾ, ಪ್ರಜ್ವಲ್ ಯಡಚಿ ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ, ಗೌರಿಪ್ರಿಯಾ ಸ್ವಾಗತಿಸಿದರು. ಮಹ್ಮದ್ ಉಮಸ್ ವಂದಿಸಿದರು.

error: Content is protected !!