ಬೈಕ್ ಕಳ್ಳತನ: ಬಾಲಕ ವಶಕ್ಕೆ

ದಾವಣಗೆರೆ, ಆ. 17- ಬೈಕ್ ಕಳ್ಳತನ ಪ್ರಕರ ಣಕ್ಕೆ ಸಂಬಂಧಿಸಿದಂತೆ ಓರ್ವ ಕಾನೂನು ಸಂಘರ್ಷಕ್ಕೊಳ ಗಾದ ಬಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಆತ ನಿಂದ 50 ಸಾವಿರ ರೂ. ಮೌಲ್ಯದ 2 ಬೈಕುಗಳನ್ನು ವಶ ಪಡಿಸಿಕೊಂಡಿದ್ದಾರೆ. ಬಾಲಕನ ನ್ನು ಬಾಲ ಮಂದಿರದ ವಶಕ್ಕೆ ಒಪ್ಪಿಸಲಾಗಿದೆ. ಕಳೆದ ಜುಲೈ ಹಾಗೂ ಆಗಸ್ಟ್ ತಿಂಗಳಂದು  ಬಸವಾಪಟ್ಟಣ ಠಾಣೆಯಲ್ಲಿ ಬೈಕ್ ಕಳ್ಳತನವಾದ ಕುರಿತು ಪ್ರಕರಣ ದಾಖಲಾಗಿದ್ದವು. ಪತ್ತೆ ಕಾರ್ಯದಲ್ಲಿ ಬಸವಾಪಟ್ಟಣ ಪೊಲೀಸ್ ಠಾಣೆ ಎಎ ಸ್‍ಐ ದೊಡ್ಡಬಸಪ್ಪ ಸಿಬ್ಬಂದಿಯವರಾದ ಇಬ್ರಾಹಿಂ, ಪ್ರಕಾಶ, ಅಣ್ಣೇಶ, ರವೀಂದ್ರ ವೈ ಹಾವೇರಿ, ಅಂಜಿನಪ್ಪ, ಜಗದೀಶ ಜಿ.ವಿ, ಸಂತೋಷ್ ಭಾಗವಹಿಸಿದ್ದರು.

error: Content is protected !!