ಶ್ರೀ ಉಡುಸಲಮ್ಮ ದೇವಿ ನೂತನ ದೇವಸ್ಥಾನದ ಉದ್ಘಾಟನೆ ಮತ್ತು ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ ಇಂದು ನಡೆಯಲಿದೆ.
ಇಂದು ಬೆಳಗಿನ ಜಾವ 4.30 ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಗಂಗೆ ಪೂಜೆ, ಗಣಪತಿ ಪೂಜೆ, ಗುರು ಕಳಸ ಪೂಜೆ, ಗುರು ಕಳಸ, ಪಂಚ ಕಳಸ, ವಾಸ್ತು, ಆದಿತ್ಯಾದಿ ನವಗ್ರಹ ಮಹಾ ಮೃತ್ಯುಂಜಯ ಪೂಜೆ, ರುದ್ರಾಭಿಷೇಕ, ಕುಂಭಾಭಿಷೇಕ, ದೇವಿಗೆ ಪುಷ್ಪಾಲಂಕಾರ, ಮಹಾಮಂಗಳಾರತಿ ನಡೆಯುವುದು.
ಬೆಳಿಗ್ಗೆ 9.30 ಕ್ಕೆ ಶ್ರೀ ಉಡುಸಲಮ್ಮ ದೇವಿ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ ನಡೆಯುವುದು. ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ಶ್ರೀ ದೇವಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ, ನೇತ್ರೋನ್ಮಿಲನ (ಜೀವಕಳೆ) ನಡೆಯುವುದು. ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯುವುದು.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಆಗಮಿಸುವರು.