ದಾವಣಗೆರೆ ಮಾದರಿ ಜಿಲ್ಲೆ ಮಾಡುವ ಪ್ರಯತ್ನ : ವಿನಯಕುಮಾರ್

ದಾವಣಗೆರೆ ಮಾದರಿ ಜಿಲ್ಲೆ ಮಾಡುವ ಪ್ರಯತ್ನ : ವಿನಯಕುಮಾರ್

ಹರಿಹರ, ಅ. 17 – ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನನಗೆ ಎಲ್ಲಾ ರೀತಿಯ ಅರ್ಹತೆ ಇದ್ದು, ಅದಕ್ಕಾಗಿ ಮತದಾರರು ನನಗೆ ಬೆಂಬಲ ನೀಡಿದರೆ, ನಾನು ದಾವಣಗೆರೆ ಜಿಲ್ಲೆಯನ್ನು, ರಾಜ್ಯದಲ್ಲಿ ಮಾದರಿ ಜಿಲ್ಲೆಯನ್ನಾಗಿ ಮಾಡುವುದಕ್ಕೆ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುವುದಾಗಿ ಇನ್‌ಸೈಟ್ಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ.ಬಿ. ವಿನಯಕುಮಾರ್ ಹೇಳಿದರು.

ನಗರದ ಕಾಟ್ವೆ ಸಭಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ಹಿತೈಷಿಗಳು ಮತ್ತು ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಅತಿ ತಳಮಟ್ಟದ ಜನರ ಸಮಗ್ರ ಅಭಿವೃದ್ಧಿಯ ಆದ್ಯತೆ ಇಟ್ಟುಕೊಂಡು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಜಿಲ್ಲೆಯ ಹಲವು ನಾಯಕರು ಹಾಗೂ ಹಿರಿಯ ಮುಖಂಡರ ಬಳಿ ಚರ್ಚೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಅವರ ಬಳಿ ಆಶೀರ್ವಾದ ಕೇಳುವುದಾಗಿ ಹೇಳಿದರು

ಮಾಜಿ ಡಿವೈಎಸ್ಪಿ ಮುರುಗಣ್ಣ ಮಾತನಾಡಿ, ವಿದ್ಯಾವಂತರು ಸಂಸದರಾದರೆ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.

ರಾಜನಹಳ್ಳಿ ಮಂಜುನಾಥ್ ಮಾತನಾಡಿ, ರಾಜಕೀಯದಲ್ಲಿರುವ ಜಾತಿ ವೈರಸ್ ಸಮಸ್ಯೆ ನೀಗಿಸಲು ಯುವಕರಿಂದ ಮಾತ್ರ ಸಾಧ್ಯ ಎಂದರು.

ಈ ವೇಳೆ ಕುಂಬಳೂರು ನಾಗರಾಜ್, ರಾಜನಹಳ್ಳಿ ಮಂಜುನಾಥ್, ನಿಂಗಪ್ಪ ಇಂಜಿನಿಯರ್, ಪುರಂದರ ಲೋಕಿಕೆರೆ, ಆಸೀಫ್ ಹಾಲಿ ಖಾನ್ ಇತರರು ಮಾತನಾಡಿದರು. ಸಭೆಯಲ್ಲಿ ಎಸ್‌.ಟಿ. ಅರವಿಂದ್‌, ಲಿಂಗರಾಜ್‌, ಶರತ್‌ಕುಮಾರ್‌ ಸೇರಿದಂತೆ ವಿವಿಧ ಸಮಾಜದ ಮುಖಂಡರು ಹಾಜರಿದ್ದರು.

error: Content is protected !!