ಇಂಡಿಯನ್ ಸೊಸೈಟಿಗೆ 20.60 ಲಕ್ಷ ರೂ. ಲಾಭ

ಇಂಡಿಯನ್ ಸೊಸೈಟಿಗೆ 20.60 ಲಕ್ಷ ರೂ. ಲಾಭ

ಹರಿಹರ : ಸಂಘದ ಸರ್ವಸದಸ್ಯರ ಮಹಾಸಭೆಯಲ್ಲಿ ಸೊಸೈಟಿ ಅಧ್ಯಕ್ಷ ಸಿ.ಎನ್. ಹುಲುಗೇಶ್ ಸಂತಸ

ಹರಿಹರ, ಅ. 15 – ದಿ ಇಂಡಿಯನ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು ಷೇರುದಾರರು ಹಾಗೂ ಆಡಳಿತ ಮಂಡಳಿ ಉತ್ತಮ ರೀತಿಯ ಸಹಕಾರದೊಂದಿಗೆ 2022-2023 ನೇ ಸಾಲಿನಲ್ಲಿ 20 ಲಕ್ಷದ 60 ಸಾವಿರ ರೂಪಾಯಿ ಲಾಭವನ್ನು ಗಳಿಸುವ ಮೂಲಕ ‘ಎ’ ವರ್ಗದ ಶ್ರೇಣಿಯಲ್ಲಿದೆ ಸೊಸೈಟಿ ಅಧ್ಯಕ್ಷ ಸಿ.ಎನ್. ಹುಲುಗೇಶ್ ಹೇಳಿದರು.

ನಗರದ ವಿದ್ಯಾನಗರದ ಐರಣಿ ಮಠದ ಸಭಾಂಗಣದಲ್ಲಿ ನಡೆದ ದಿ ಇಂಡಿಯನ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ನಿಯಮಿತದ 5 ನೇ ವರ್ಷದ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

2022-23 ನೇ ಸಾಲಿಗೆ 2003 ಸದಸ್ಯರನ್ನು ಹೊಂದಿದ್ದು, 1 ಕೋಟಿ 47 ಲಕ್ಷದ 97 ಸಾವಿರ ರೂಪಾಯಿ ಷೇರು ಬಂಡವಾಳ ಹೊಂದಿದೆ. 7 ಕೋಟಿ 92 ಲಕ್ಷದ 22 ಸಾವಿರದ 476 ರೂಪಾಯಿ ಠೇವಣಿಗಳನ್ನು ಸಂಗ್ರಹಿಸಿ, 9 ಕೋಟಿ 22 ಲಕ್ಷದ 19 ಸಾವಿರದ 900 ರೂಪಾಯಿ ಸಾಲವನ್ನು ನೀಡಿದೆ. 100 ಕೋಟಿ 4 ಲಕ್ಷದ 26 ಸಾವಿರ ವಾರ್ಷಿಕ ವ್ಯವಹಾರ ಮಾಡಿದೆ ಎಂದರು.

13,53,867 ರೂಪಾಯಿ ಕಟ್ಟಡದ ನಿಧಿಯನ್ನು ಹೊಂದಿರುತ್ತದೆ. ಹಾಗೂ ವಿದ್ಯಾನಗರ ಎ ಬ್ಲಾಕ್‌ನಲ್ಲಿ 30/50 ಅಳತೆಯ ಎರಡು ಖಾಲಿ ನಿವೇಶನಗಳನ್ನು ಖರೀದಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂಡಿಯನ್ ಸೌಹಾರ್ದ ಸೌಧ ಎಂಬ ಕಟ್ಟಡ ನಿರ್ಮಿಸುವ ಚಿಂತನೆ ಇದೆ ಎಂದರು.

ಈ ವೇಳೆ ದಾವಣಗೆರೆಯ ಲೆಕ್ಕಪರಿಶೋಧಕ ಉಮೇಶ್ ಶೆಟ್ಟಿ, ಬೆಂಗಳೂರಿನ ಸಂಯುಕ್ತ ಸಹಕಾರಿ ನಿರ್ದೇಶಕ ಎಂ.‌ಆರ್ ಪ್ರಭುದೇವ್, ಮಾಜಿ ತುಂಗಭದ್ರಾ ಸೊಸೈಟಿ ಅಧ್ಯಕ್ಷ ಡಿ. ಹೇಮಂತರಾಜ್, ಮಾಜಿ ಹರ ವಿವಿಧೋದ್ಧೇಶ ಸಹಕಾರಿ ಸೊಸೈಟಿ ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ, ವಿಶ್ವಬಂಧು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಬೆಳ್ಳೂಡಿ ಬಿ. ರಾಮಚಂದ್ರಪ್ಪ, ಆಂಜನೇಯ ಸೊಸೈಟಿ ಅಧ್ಯಕ್ಷ ಚಂದ್ರಶೇಖರಪ್ಪ ಮಾತನಾಡಿದರು.

ವಾರ್ಷಿಕ ವರದಿಯನ್ನು ಮುಖ್ಯ ಕಾರ್ಯನಿರ್ವಾ ಹಣಾಧಿಕಾರಿ ರವೀಂದ್ರನಾಥ ಆರ್.ಎಸ್. ಓದಿದರು.

ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ರವೀಂದ್ರನಾಥ ಆರ್.ಎಸ್ ಉಪಾಧ್ಯಕ್ಷ ಎಂ. ಬಿ. ಪ್ರಭುದೇವ್, ನಿರ್ದೇಶಕರಾದ ಕೆ.ಹೆಚ್. ಮಲ್ಲೇಶಪ್ಪ, ಜೋಸೆಫ್ ದಿವಾಕರ್, ಭಕ್ತಸಿಂಗ್, ರಿಯಾಜ್ ಆಹ್ಮದ್, ಮಾರುತಿ ಶೆಟ್ಟಿ, ಸೈಯದ್ ಆಸೀಫ್ ಅಹ್ಮದ್, ಉಮಾಶಂಕರ್, ಜಗದೀಶ್ ಚೂರಿ, ಸುಕುಮಾರ್ ಹೆಚ್.ಎಂ. ಸುಜಾತ ಡ್ಯಾನಿಯಲ್, ವನಜಾಕ್ಷಿ, ಸಿಬ್ಬಂದಿಗಳಾದ ರಿಚರ್ಡ್ ಟೈಸನ್, ಸಂತೋಷ ವಿ.ಡಿ. ಎಸ್.ಡಿ.ಎ ಭೂಮಿಕಾ, ಪಿಗ್ಮಿ ಸಂಗ್ರಾಹಕರಾದ ಚಂದ್ರಶೇಖರ್ ಎಸ್.ಎಂ. ಮಂಜುನಾಥ್, ಎ. ಹನುಮಂತಪ್ಪ ಜಿ.ಎಸ್. ಸಂದೀಪ್, ಎಸ್.ಎನ್. ಇಮ್ಯಾನುಯಲ್, ಮಧುಕರ್, ಮಲ್ಲೇಶ್ ಆರ್, ಅನೀಲ್ ಪಿ.ಜಿ., ರವಿಕುಮಾರ್ ಎಸ್. ಸತೀಶ್ ಕುಮಾರ್ ಪಿ. ಇರ್ಷಾದ್ ಅಲಿ, ಅರುಣ್ ಕುಮಾರ್ ಎಸ್.  ಹಾಗೂ ಇತರರು ಹಾಜರಿದ್ದರು.

error: Content is protected !!