ಸಮಾನ ಮನೋಭಾವನೆ ಹೊಂದಿದಾಗ ಮಾತ್ರ ಯಶಸ್ಸು

ಸಮಾನ ಮನೋಭಾವನೆ ಹೊಂದಿದಾಗ ಮಾತ್ರ ಯಶಸ್ಸು

ಪಂಚಮಸಾಲಿ ಸಮಾಜದ `ಸ್ವ ಉದ್ಯೋಗ ಪ್ರೇರಣೆ’ ಕಾರ್ಯಕ್ರಮದಲ್ಲಿ ಬಿ.ಸಿ.ಉಮಾಪತಿ ಅಭಿಮತ 

ದಾವಣಗೆರೆ, ಆ.15- ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವನೆ ಹೊಂದಿದರೆ ಮಾತ್ರ   ಜೀವನದಲ್ಲಿ ಯಶಸ್ಸು  ಕಾಣಬಹುದು ಎಂದು  ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಪ್ರಧಾನ ಧರ್ಮದರ್ಶಿ  ಬಿ.ಸಿ.  ಉಮಾಪತಿ  ತಿಳಿಸಿದರು.

ವೀರಶೈವ ಲಿಂಗಾಯತ  ಪಂಚಮಸಾಲಿ ಸಮಾಜದ    ಜಿಲ್ಲಾ ಮತ್ತು ನಗರ ನೌಕರರ ಘಟಕ ಗಳ ವತಿಯಿಂದ    ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯ ತರಬೇತುದಾರರಾದ   ಶ್ರೀಮತಿ ಕವಿತಾ ವೈ  ಇವರಿಂದ `ಸ್ವ ಉದ್ಯೋಗ ಪ್ರೇರಣೆ’ ಎಂಬ ವಿಷಯದ ಬಗ್ಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಉಮಾಪತಿ ಮಾತನಾಡಿದರು.

ಯಾರೂ ಸಹ ಪೂರ್ಣ ಪ್ರಮಾಣದಲ್ಲಿ ತಿಳಿದುಕೊಂಡಿರುವುದಿಲ್ಲ. ವಿಚಾರ ಸಂಗಮದ ಮೂಲಕ ಅನೇಕ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯ. ಮಾಹಿತಿಗಳನ್ನು ಮತ್ತೊಬ್ಬರಿಗೆ ತಿಳಿಸುವ ಕಾರ್ಯ ನಿಜಕ್ಕೂ ದೇಶ ಸೇವೆ ಮಾಡಿದ ಸೇವೆಗೆ ಸಮಾನ. ಸರ್ವರನ್ನೂ ಸಮಾನವಾಗಿ ಕಾಣುವ ಮನೋಭಾವನೆ ಹೊಂದಿದರೆ ಮಾತ್ರ ಮತ್ತು ಸತತ ಪರಿಶ್ರಮವೇ ಜೀವನದ ಯಶಸ್ಸಿಗೆ ಕಾರಣವೆಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ   ಕವಿತಾ ವೈ. ಮಾತ ನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಅತಿಯಾದ ಮಮತೆ ತೋರಿಸದೆ ಅವರಿಗೆ ಜೀವನ ಕೌಶಲ್ಯಗಳನ್ನು ತಿಳಿಸಿ, ಕಷ್ಟಕಾರ್ಪಣ್ಯದ ಅರಿವನ್ನು ಮೂಡಿಸಿದರೆ  ಸಾಕಷ್ಟು ಅದ್ಭುತ ರೀತಿಯಲ್ಲಿ ಬೆಳೆಯುತ್ತಾರೆ ಎಂದರು.

ನಮ್ಮ ಸಂಸ್ಥೆಯಲ್ಲಿ 18ರಿಂದ 45 ವರ್ಷದ ಒಳಗಿನ ವಯಸ್ಸಿನವರಿಗೆ ತಮ್ಮ ಜೀವನದಲ್ಲಿ ತಮ್ಮ ಸ್ವಂತ ಕಾಲ ಮೇಲೆ ನಿಂತುಕೊಳ್ಳುವುದಕ್ಕೆ  ಕೌಶಲ್ಯ ತರಬೇತಿ ನೀಡಲಾಗುತ್ತಿದೆ.   ಇಲ್ಲಿಯವರೆಗೆ ಸಂಸ್ಥೆಯಿಂದ 17000 ಕ್ಕೂ ಹೆಚ್ಚು ಅಭ್ಯರ್ಥಿಗಳು ತರಬೇತಿ ಪಡೆದಿದ್ದಾರೆ. ಅದರಲ್ಲಿ ಅನೇಕರು ಸ್ವ ಉದ್ಯೋಗದಲ್ಲಿ ಜಯಶಾಲಿಯಾಗಿದ್ದು, ಎಲ್ಲಾ ನಿರುದ್ಯೋಗಿ ಯುವಕ, ಯುವತಿಯರು ಕೂಡಲೇ ಸಂಸ್ಥೆಗೆ ಭೇಟಿ ನೀಡುವಂತೆ ತಿಳಿಸಿದರು. 

ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಕಾಶಿನಾಥ್ ಮಾತನಾಡಿ, ಈ `ವಿಚಾರ ಸಂಗಮ’ ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಉಪಾಧ್ಯಕ್ಷ  ವಾಣಿ ಶಿವಣ್ಣ ಮತ್ತು   ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷ    ಕೆ. ಶಿವಕುಮಾರ್ (ರಾಜು)  ಅವರನ್ನು  ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ನೌಕರ ಘಟಕದ ಅಧ್ಯಕ್ಷ ಶ್ರೀಧರ್‍ ವಹಿಸಿದ್ದರು.    ಜಿಲ್ಲಾ ಉಪಾಧ್ಯಕ್ಷ ರಾದ ಎಂ. ದೊಡ್ಡಪ್ಪ, ಕೆ. ಷಣ್ಮುಖಪ್ಪ, ಶ್ರೀ ಪೀಠದ  ದಾಸೋಹ ಸಮಿತಿ  ಅಧ್ಯಕ್ಷ ಷಣ್ಮು ಖಪ್ಪ ಮೇಷ್ಟ್ರು,  ನಗರ ನೌಕರ ಅಧ್ಯಕ್ಷ ಕೆ.ಎಸ್.  ಸುರೇಶ್,  ಕಾರ್ಯದರ್ಶಿ   ಬಿ.ಯು. ಕುಬೇ ರಪ್ಪ, ತಾಲ್ಲೂಕ್ ಅಧ್ಯಕ್ಷ ಎಸ್. ಮಲ್ಲಿ ನಾಥ್,  ಕಾರ್ಯದರ್ಶಿ ಮಂಜುನಾಥ್ ಪುರವಂತರ್ ಮಹಿಳಾ ಘಟಕ  ದವರು  ಹಾಜರಿದ್ದರು.

ಬಿ. ಟಿ. ಪ್ರಕಾಶ್ ಪ್ರಾರ್ಥಿಸಿದರು.  ಕುಬೇರಪ್ಪ ಬಿ.ಯು.   ಸ್ವಾಗತಿಸಿದರು.   ಎಂ. ಎಸ್. ದೇವರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಡಿ ತಿಪ್ಪೇಸ್ವಾಮಿ ವಂದಿಸಿದರು.  ಎಸ್. ಮಲ್ಲಿನಾಥ್‍,  ಸಂಪನ್ಮೂಲ ವ್ಯಕ್ತಿ  ಶ್ರೀಮತಿ ಕವಿತಾ ಅವರ ಪರಿಚಯ ಮಾಡಿಕೊಟ್ಟರು.

error: Content is protected !!