ನಗರದಲ್ಲಿ ಇಂದು `ಕಲಾ ಕೃತಿಕ – 2023′ ಫ್ಯಾಷನ್ ಶೋ

ಕಲಾನಿ-ಕೇತನ ಕಾಲೇಜ್ ಆಫ್ ಫ್ಯಾಷನ್ ಡಿಜೈನಿಂಗ್‌ ವತಿಯಿಂದ ಕಲಾ ಕೃತಿಕ -2023′ ಫ್ಯಾಷನ್ ಶೋ ಮತ್ತು ‘ಮಿಸ್.ಫ್ಯಾಷನ್ ಫ್ಲೋರಿಶ್–23’ ಸ್ಪರ್ಧೆ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 10 ಗಂಟೆಗೆ ಹೋಟೆಲ್‌ ಪೂಜಾ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಉದ್ಘಾಟಿಸಲಿದ್ದಾರೆ. ಅಕಾಡೆಮಿ ಆಫ್ ಕ್ರಿಯೇಟಿವ್ ಎಜುಕೇಷನ್‌ ಕಾರ್ಯದರ್ಶಿ ಅಶೋಕ ರಾಯಬಾಗಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಇತರೆ ಗಣ್ಯರು ಆಗಮಿಸಲಿದ್ದಾರೆ. 

ಕಾಲೇಜಿನ ವಿದ್ಯಾರ್ಥಿನಿಯರು ತಾವುಗಳೇ ವಿನ್ಯಾಸಗೊಳಿಸಿದ ವೈವಿಧ್ಯಮಯ ಮತ್ತು ಕಲಾತ್ಮಕವಾದ ವಸ್ತ್ರ ವಿನ್ಯಾಸ ಪ್ರದರ್ಶನವನ್ನು ನಡೆಸಿಕೊಡಲಿದ್ದು, ಸುಮಾರು 150 ವಸ್ತ್ರ ವಿನ್ಯಾಸಗಳನ್ನು ಉತ್ಸವದಲ್ಲಿ ಪ್ರದರ್ಶಿಸಲಾಗುವುದು. 

ಪ್ರದರ್ಶನದ ನಂತರ ಸಂಜೆ 5.30 ರಿಂದ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ.

ಉದಯೋನ್ಮುಖ ಯುವ ಮಹಿಳೆಯರಿಗೆ ಮಾಡೆಲಿಂಗ್ ಕ್ಷೇತ್ರವನ್ನು ಪ್ರವೇಶಿಸಲು ಮಿಸ್ ಫ್ಯಾಷನ್, ಫ್ಲೋರಿಶ್-01 ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು ಈ ಸ್ಪರ್ಧೆಯ ಅಂತಿಮ ಸುತ್ತು  ಕಾಲೇಜಿನ ಕಲಾ ಕೃಷಿಕ 2023 ವೇದಿಕೆಯಲ್ಲಿ ಕಲ್ಪಿಸಲಾಗಿದೆ.

error: Content is protected !!