ರಾಣೇಬೆನ್ನೂರು, ಆ.13- ಇಲ್ಲಿನ ಗಂಗಾ ವಿವಿಧೋದ್ಧೇಶ ಸಹಕಾರಿ ಬ್ಯಾಂಕ್‌ನಲ್ಲಿ ದಿವಂಗತ ದೇವರಾಜ ಅರಸು ಅವರ 108 ನೇ ಹುಟ್ಟು ಹಬ್ಬ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮವು ನಾಡಿದ್ದು ದಿನಾಂಕ 15 ರಂದು ಬೆಳಿಗ್ಗೆ ಕರಾವಳಿ ಸಭಾಭವನದಲ್ಲಿ ನಡೆಯಲಿದೆ.
ಜನವಾಡ ಅಲ್ಲಮಪ್ರಭು ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಡಾ. ನಾಗರಾಜ ದೊಡ್ಮನಿ ಉದ್ಘಾಟಿಸುವರು. ಡಾ. ಕಾಂತೇಶ ಅಂಬಿಗೇರ, ಹು ಬ್ಬಳ್ಳಿಯ ಹರಿಓಂ ಸುಧಾಕರ ಶೆಟ್ಟಿ ಅತಿಥಿಗಳಾಗಿ ಆಗಮಿಸು ವರು. ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ರತ್ನಾಕರ ಕುಂದಾಪೂರ ವಹಿಸುವರು.