ಸಿದ್ದಗಂಗಾ ಶಾಲೆಯಲ್ಲಿ ಗಿಡಮೂಲಿಕೆ ದಿನಾಚರಣೆ

ಸಿದ್ದಗಂಗಾ ಶಾಲೆಯಲ್ಲಿ ಗಿಡಮೂಲಿಕೆ ದಿನಾಚರಣೆ

ದಾವಣಗೆರೆ, ಆ. 13- ಪತಂಜಲಿ ಯೋಗ ಸಮಿತಿ,  ಭಾರತ್ ಸ್ವಾಭಿಮಾನ ಟ್ರಸ್ಟ್,  ಮಹಿಳಾ ಪತಂಜಲಿ ಯೋಗ ಸಮಿತಿ,  ಯುವ ಭಾರತ್ ಹಾಗೂ ಕಿಸಾನ್ ಸೇವಾ ಸಮಿತಿ ಇವರ ಸಹಯೋಗದೊಂದಿಗೆ ಶ್ರೀ ಸಿದ್ದಗಂಗಾ ಶಾಲೆಯಲ್ಲಿ ಶ್ರೀ ಸಿದ್ಧಗಂಗಾ ಯೋಗ ಕೇಂದ್ರದ 10ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪತಂಜಲಿ ಆಯುರ್ವೇದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ  ನಿರ್ವಹಣಾಧಿಕಾರಿ ಬಾಲಕೃಷ್ಣ ಜೀ ಇವರ ಜನ್ಮ ದಿನಾಚರಣೆ ಪ್ರಯುಕ್ತ ಪತಂಜಲಿ ಪರಿವಾರದ ವತಿಯಿಂದ ಜಡಿಬೂಟಿ ದಿವಸ್ ಅಥವಾ ಗಿಡಮೂಲಿಕೆ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  

ಮುಖ್ಯ ಅತಿಥಿಯಾಗಿ ಶ್ರೀಮತಿ ಆರತಿ ಕಾನಗೋ  ಅಗ್ನಿ ಹೋತ್ರದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, `ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ’ವಿಷಯದ ಕುರಿತು ಉಪನ್ಯಾಸ ಮಾಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಪಾರಂಪರಿಕ ವೈದ್ಯರು ಹಾಗೂ ಕರ್ನಾಟಕ ರಾಜ್ಯ ಪಾರಂಪರಿಕ ವೈದ್ಯರ ಸಂಘದ ಮಾಜಿ ಅಧ್ಯಕ್ಷ ನೇರ್ಲಿಗಿ  ಗುರುಸಿದ್ದಪ್ಪ   `ಹಿತ್ತಲ ಗಿಡವೇ ಮದ್ದು’ ಎಂಬ ವಿಷಯದ ಕುರಿತು ಮಾತನಾಡಿದರು.

ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಜಸ್ಟಿನ್ ಡಿ’ಸೌಜ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪತಂಜಲಿ ಯೋಗ ಸಮಿತಿ ಮಂಡಲ ಪ್ರಭಾರಿ ಎಸ್.ಎಸ್. ಷಣ್ಮುಖಪ್ಪ, ಎನ್.ವಿ. ಸುನೀಲ್‌ಕುಮಾರ್, ಶ್ರೀಮತಿ ಜ್ಯೋತಿ ಜಂಬಗಿ, ಶ್ರೀಮತಿ ಅಂಜಲಿದೇವಿ, ಶ್ರೀಮತಿ ಚಂದ್ರಮ್ಮ,  ಶ್ರೀಮತಿ ಸಾವಿತ್ರಮ್ಮ,  ಕುಮಾರಿ ಪೂಜಾ,  ಶ್ರೀಮತಿ ಶಾಂತ ವೀರಮ್ಮ,  ಶ್ರೀಮತಿ ರೇಣುಕಾ,  ಶ್ರೀಮತಿ ಇ.ಕೆ. ರೇಣುಕಾ,  ಭಾರತಿ ಗಂಗಾಂಬಿಕೆ,  ದೇವರಾಜ್ ಲಿಂಗರಾಜು,  ಜಯಮ್ಮ, ಶಾಂತಮ್ಮ  ಉಪಸ್ಥಿತರಿದ್ದು ಮಾತನಾಡಿದರು.

ಶ್ರೀಮತಿ ಸುಮತಿ ಹಾಲೇಶ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಎಸ್. ಮಂಜುಳಾ ಪಾಟೀಲ್ ಪ್ರಾರ್ಥಿಸಿದರು. ಶ್ರೀಮತಿ ಲತಾ ಸ್ವಾಗತಿಸಿದರು. ಮುಜೀಬ್ ಖಾನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.   ಶ್ರೀಮತಿ ಈರಮ್ಮ  ವಂದಿಸಿದರು. ಲತಾ ಮತ್ತು  ಸಂಗಡಿ ಗರು ಯೋಗ ನೃತ್ಯ ಹಾಗೂ ಯೋಗ ಗೀತೆ ಹಾಡಿದರು.

error: Content is protected !!